ಸರ್ಕಾರಿ ಸೇರಿದಂತೆ ಅನೇಕ ಸೇವೆಗಳ ಲಾಭ ಪಡೆಯಲು ಈಗ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಫೋಟೋ ದಾಖಲೆಯಾಗಿದೆ. ಆಧಾರ್ ಕಾರ್ಡ್ ನಲ್ಲಿ ಬಂದಿರುವ ಫೋಟೋ ಇಷ್ಟವಾಗಿಲ್ಲ ಎನ್ನುವವರು ಫೋಟೋ ಬದಲಿಸಬಹುದು. ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಬದಲಿಸಬಹುದು.
ಆಧಾರ್ ಕಾರ್ಡ್ ಫೋಟೋ ಬದಲಿಸಲು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆದ್ರೆ ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ಯುಐಡಿಎಐಗೆ ಬರುವ ಸಾಮಾನ್ಯ ದೂರುಗಳಲ್ಲಿ ಫೋಟೋ ಬಗ್ಗೆ ಅಸಮಾಧಾನವೂ ಒಂದು. ಸ್ಥಳೀಯ ಆಧಾರ್ ಕೇಂದ್ರದಲ್ಲಿ ಫೋಟೋ ನವೀಕರಿಸುವ ಮೊದಲು ಯುಐಡಿಎಐ ವೆಬ್ ಸೈಟ್ uidai.gov.in ಗೆ ಹೋಗಿ ದಾಖಲಾತಿ ಫಾರ್ಮನ್ನು ಡೌನ್ಲೋಡ್ ಮಾಡಬೇಕು. ಫಾರ್ಮ್ ತುಂಬಿದ ನಂತ್ರ ಅದನ್ನು ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ನೀಡಬೇಕು. ಅಲ್ಲಿ ಬಯೋಮೆಟ್ರಿಕ್ ವಿವರಗಳನ್ನು ಒದಗಿಸಬೇಕು.
ಫೋಟೋ ಬದಲಾಯಿಸಲು 25 ಶುಲ್ಕದ ಜೊತೆ ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ. ಕೇಂದ್ರದಲ್ಲಿರುವ ನಿರ್ವಾಹಕರು ನಿಮ್ಮ ಫೋಟೋ ತೆಗೆಯುತ್ತಾರೆ. ನವೀಕರಣ ವಿನಂತಿ ಸಂಖ್ಯೆ ಜೊತೆ ಸ್ವೀಕೃತ ಸ್ಲಿಪ್ ನೀಡಲಾಗುತ್ತದೆ. uidai.gov.in ವೆಬ್ ಸೈಟ್ ನಲ್ಲಿಯೇ ನೀವು ನವೀಕರಣ ವಿನಂತಿ ಸಂಖ್ಯೆ ಬಳಸಿ ನಿಮ್ಮ ಫೋಟೋ ನವೀಕರಣವಾಗಿದೆಯಾ ಎಂಬುದನ್ನು ಪರೀಕ್ಷೆ ಮಾಡಬಹುದು. ನವೀಕರಣಕ್ಕೆ 90 ದಿನ ತೆಗೆದುಕೊಳ್ಳುತ್ತದೆ. ನಂತ್ರ ನಿಮ್ಮ ಫೋನ್ ಗೆ ಸಂದೇಶ ಬರುತ್ತದೆ. ಅಲ್ಲದೆ ಇದೇ ವೆಬ್ಸೈಟ್ ನಲ್ಲಿ ಇ-ಆಧಾರ್ ಕೂಡ ಡೌನ್ಲೋಡ್ ಮಾಡಬಹುದು.