
ಖುಷಿಯಾಗಿರುವ ಮನಃಸ್ಥಿತಿ ನಮ್ಮದಿದ್ದರೆ ಎಲ್ಲಿ ಬೇಕಾದರೂ ಸಂತಸ ಕಂಡುಕೊಳ್ಳಬಹುದು ಎಂದು ಆಗಾಗ್ಗೆ ಸಾಬೀತುಪಡಿಸುವ ಅನೇಕ ನಿದರ್ಶನಗಳ ಬಗ್ಗೆ ಓದಿದ್ದೇವೆ.
ಇಂಥದ್ದೇ ಒಂದು ನಿದರ್ಶನದಲ್ಲಿ ಮೂವರು ಪುಟಾಣಿಗಳು ತಮ್ಮದೇ ಸ್ಟ್ರೀಟ್ ಕನ್ಸರ್ಟ್ ಮಾಡಿಕೊಂಡು, ಕೈಯಲ್ಲಿ ಕಾಲ್ಪನಿಕವಾದ ವಾದ್ಯೋಪಕರಣಗಳನ್ನು ಹಿಡಿದು ತಮ್ಮಿಚ್ಛೆಯ ಹಾಡು ಹೇಳುತ್ತಿರುವ ವಿಡಿಯೋವೊಂದನ್ನು ಐಪಿಎಸ್ ಅಧಿಕಾರಿ ಭೀಷಮ್ ಸಿಂಗ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಪುಟಾಣಿಯೊಬ್ಬ ಕೈಯಲ್ಲಿ ಕಡ್ಡಿ ಹಿಡಿದುಕೊಂಡು ಅದನ್ನೇ ಗಿಟಾರ್ನಂತೆ ಬಾರಿಸುತ್ತಿದ್ದು, ಇನ್ನಿಬ್ಬರು ಪುಟ್ಟರು ಅವನಿಗೆ ಕೋರಸ್ ಕೊಡುತ್ತಿದ್ದಾರೆ.
ʼಇಂಟ್ರಸ್ಟಿಂಗ್ʼ ಆಗಿದೆ ಈ ಯಶಸ್ವಿ ಉದ್ಯಮ ಆರಂಭವಾಗಿದ್ದರ ಹಿಂದಿನ ಕಥೆ
“ಸಂತಸ ಎನ್ನುವುದು ನಿಮ್ಮ ಆಟಿಟ್ಯೂಡ್” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ ಸಿಂಗ್. ಆ ಪೋರರು ಯಾರು ಹಾಗೂ ಆ ಜಾಗ ಯಾವುದೆಂದು ತಿಳಿದುಬಂದಿಲ್ಲ.
https://twitter.com/Sheba_73/status/1381583066380918784?ref_src=twsrc%5Etfw%7Ctwcamp%5Etweetembed%7Ctwterm%5E1381583066380918784%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-young-kids-playing-most-expensive-guitar-in-this-street-concert-is-a-mark-of-happiness-3636851.html