ಸ್ವಂತ ಮನೆಯನ್ನ ಖರೀದಿ ಮಾಡೋದು ಪ್ರತಿಯೊಬ್ಬರ ಕನಸು. ಅದರಲ್ಲೂ ಐಶಾರಾಮಿ ಮನೆಯನ್ನ ಖರೀದಿ ಮಾಡಬೇಕು ಅನ್ನೋ ಆಸೆ ಯಾರಿಗ್ ತಾನೆ ಇರೋದಿಲ್ಲ ಹೇಳಿ. ಆಧುನಿಕ ಶೈಲಿಯ ಮನೆಯೇ ಆಗಿರಲಿ ಅಥವಾ ಪುಟ್ಟ ನಿವಾಸವೇ ಆಗಿರಲಿ ಎಲ್ಲರಿಗೂ ಮನೆ ಅಚ್ಚುಕಟ್ಟಾಗಿ ಇರಬೇಕು ಅನ್ನೋ ಆಸೆ ಇದ್ದೇ ಇರುತ್ತೆ.
ಆದರೆ ಡೆವಲಪರ್ನ ಸಣ್ಣ ತಪ್ಪಿನಿಂದಾಗಿ ವ್ಯಕ್ತಿಯೊಬ್ಬನ ಐಷಾರಾಮಿ ಮನೆಯ ಕನಸು ದುಃಸ್ವಪ್ನವಾಗಿ ಬದಲಾಗಿದೆ. ನೇಪಾಳದ ವಿಷ್ಣು ಆರ್ಯಲ್ ಎಂಬವರು ಕಷ್ಟಪಟ್ಟು ಕೂಡಿಟ್ಟ ಹಣದಿಂದ ಕನಸಿನ ಮನೆಯನ್ನ ಹೊಂದುವ ಆಸೆ ಇಟ್ಟುಕೊಂಡಿದ್ದರು. ಇದಕ್ಕಾಗಿ ಅವರು ನಾಲ್ಕು ಕೋಟಿ ರೂಪಾಯಿಯನ್ನ ಮೀಸಲಿಟ್ಟಿದ್ದರು.
ಆಸ್ಟ್ರೇಲಿಯಾದಲ್ಲಿ ಹೊಸ ಜೀವನ ಶುರು ಮಾಡಬೇಕು ಎಂದುಕೊಂಡಿದ್ದ ಆರ್ಯಲ್ ಸಿಡ್ನಿಯಲ್ಲಿ ಈ ಕನಸಿನ ಮನೆಯನ್ನ ಕಟ್ಟಿಸುತ್ತಿದ್ದರು. ಇದಕ್ಕಾಗಿ ಅವರು ಜ್ಯಾಕ್ ಹೋಮ್ಸ್ ಜೊತೆ 1.85 ಕೋಟಿ ರೂಪಾಯಿಯ ಅಗ್ರಿಮೆಂಟ್ಗೆ ಸಹಿ ಹಾಕಿದ್ದರು. ಜಾಗಕ್ಕಾಗಿ ಪ್ರತ್ಯೇಕವಾಗಿ 2.2 ಕೋಟಿ ರೂಪಾಯಿ ನೀಡಿದ್ದರು.
ಆದರೆ ಡೆವಲಪರ್ನ ತಪ್ಪಿನಿಂದಾಗಿ ಅವರೀಗ ಕೇವಲ ಅರ್ಧ ಆಸ್ತಿಯನ್ನ ಮಾತ್ರ ಹೊಂದುವಂತಾಗಿದೆ. ಬಿಲ್ಡರ್ನ ಗೊಂದಲದಿಂದಾಗಿ ವಿಶಾಲ ಮನೆಯನ್ನ ಹೊಂದುವ ಕನಸು ದುಃಸ್ವಪ್ನವಾಗಿ ಬದಲಾಗಿದೆ. ಇದೀಗ ಅವರ ಬಳಿ ಕೇವಲ ಅರ್ಧ ಮನೆ ಇದ್ದು ಇದು ನೋಡೋಕೆ ಬಹಳ ವಿಚಿತ್ರವಾಗಿ ಕಾಣ್ತಿದೆ.