ಕಣ್ಣೆದುರೇ ತಂದೆ ಸಾವು: ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಯುವತಿಯ ಆಕ್ರೋಶ 15-04-2021 6:36AM IST / No Comments / Posted In: Corona, Corona Virus News, Latest News, India ಆಸ್ಪತ್ರೆಗೆ ಸಚಿವರು ಭೇಟಿ ನೀಡಿದ್ದಾರೆ ಎಂಬ ಕಾರಣಕ್ಕೆ ಕೊರೊನಾ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡದ ಕಾರಣ ರೋಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತಾ ಆಸ್ಪತ್ರೆಗೆ ಭೇಟಿ ನೀಡಿದ್ದ ಕಾರಣ ಕೊರೊನಾ ರೋಗಿಯನ್ನ ದಾಖಲು ಮಾಡಿಕೊಳ್ಳುವಲ್ಲಿ ವಿಳಂಬವಾಗಿದೆ. ಇದರಿಂದ ವೃದ್ಧ ಕೋವಿಡ್ ಸೋಂಕಿತ ಸಾವನ್ನಪ್ಪಿದ್ದಾರೆ. ಸ್ಥಳೀಯ ಮಾಧ್ಯಮಗಳು ಬಿತ್ತರಿಸಿದ ವರದಿ ಪ್ರಕಾರ, ಲವಕುಮಾರ್ ಗುಪ್ತಾ ಎಂಬವರನ್ನ ರಾಂಚಿ ಸರ್ದಾರ್ ಆಸ್ಪತ್ರೆಗೆ ಕರೆತರಲಾಗಿತ್ತು. ಗುಪ್ತಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇರದ ಕಾರಣ ಅವರನ್ನು ಈ ಆಸ್ಪತ್ರೆಗೆ ಕರೆತರಲಾಗಿತ್ತು. ಈ ಆಸ್ಪತ್ರೆಗೆ ಸಚಿವ ಬನ್ನಾ ಗುಪ್ತಾ ಪರಿಶೀಲನೆ ನಡೆಸಲು ಆಗಮಿಸಿದ್ದರು. ಇದರಿಂದ ಸ್ಟ್ರೆಚರ್ಗಾಗಿ ವೃದ್ಧ ಸೋಂಕಿತ ಗಂಟೆಗಟ್ಟಲೇ ಕಾಯುವಂತಾಯ್ತು. ಗುಪ್ತಾರನ್ನ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವಲ್ಲಿ ಬಹಳ ವಿಳಂಬವಾದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಸರ್ಕಾರಿ ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಮೃತ ಗುಪ್ತಾರ ಪುತ್ರಿ ಆಕ್ರೋಶ ಹೊರಹಾಕಿದ್ದಾರೆ. Jharkhand Health Minister Banna Gupta inspected COVID-19 ward at Sadar Hospital in Ranchi yesterday. "Some patients have mild symptoms or are asymptomatic. They are being sent to home isolation… I'll make sudden inspections to other hospitals as well," he said. pic.twitter.com/FNazrDCYiA — ANI (@ANI) April 13, 2021 सिस्टम से लाचार एक पिता ने अस्पताल परिसर में दम तोड़ा तो बेटी ने मंत्री को सामने देख खरी खोटी सुना दी@nishikant_dubey @yourBabulal @BannaGupta76 @drharshvardhan @PMOIndia pic.twitter.com/poMf32u31u — mukesh kumar (@Mukesh_Ranchi) April 13, 2021 https://twitter.com/i/status/1381913523886858244