ಚೀನಾದ ಅಧಿಕಾರಿಗಳು ಡುನ್ಹುವಾಂಗ್ ನಗರದ ಮಿಂಗ್ಶಾ ಪರ್ವತ ದಲ್ಲಿ ಒಂಟೆಗಳಿಗಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದಾರೆ. ಇದು ವಿಶ್ವದ ಮೊದಲ ಒಂಟೆಗಳ ಟ್ರಾಫಿಕ್ ಸಿಗ್ನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ನಗರದಲ್ಲಿ ಪ್ರವಾಸಿಗರಿಗೆ ಒಂಟೆಗಳ ಮೇಲೆ ಸವಾರಿ ಮಾಡಲು ಅವಕಾಶ ಸಿಗುತ್ತದೆ. ಇಲ್ಲಿ ಸಾಕಷ್ಟು ಮಂದಿ ಒಂಟೆ ಸವಾರಿ ಮಾಡೋದ್ರಿಂದ ಒಂಟೆಗಳ ನಡುವಿನ ಘರ್ಷಣೆಯನ್ನ ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮವನ್ನ ಕೈಗೊಳ್ಳಲಾಗಿದೆ.
ಸಾಮಾನ್ಯ ಟ್ರಾಫಿಕ್ ಸಿಗ್ನಲ್ಗಳಂತೆ ಇದೂ ಸಹ ಹಸಿರು ಬಣ್ಣಕ್ಕೆ ತಿರುಗಲಿದ್ದು ಈ ವೇಳೆ ಒಂಟೆಗಳು ಸಂಚರಿಸಲಿವೆ.
ಕೆಂಪು ಬಣ್ಣ ಬೆಳಗಿದ ಕೂಡಲೇ ಒಂಟೆಗಳು ಸಂಚಾರ ನಿಲ್ಲಿಸಲಿವೆ. ಮಿಂಗ್ಶಾ ಪರ್ವತಕ್ಕೆ ಹಾಡುವ ಮರಳು ಎಂಬ ಹೆಸರೂ ಕೂಡ ಇದೆ. ಇಲ್ಲಿ ಗಾಳಿ ಬೀಸುತ್ತಿದ್ದಂತೆಯೇ ಮರಳುಗಳಲ್ಲಿ ವಿಶೇಷ ಶಬ್ದ ಕೇಳೋದ್ರಿಂದ ಈ ಹೆಸರನ್ನ ಇಡಲಾಗಿದೆ.