ಕೊರೊನಾ ವೈರಸ್ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾ, ಲಾಕ್ ಡೌನ್ ನಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಕೆಲವರು ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ದಾರೆ. ಬ್ರಿಟನ್ ನಲ್ಲಿ ಕೆಲಸ ಕಳೆದುಕೊಂಡ ಹುಡುಗಿಯರು ಹುಡುಕಿಕೊಂಡ ದಾರಿ ಆಘಾತಕಾರಿಯಾಗಿದೆ.
ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಕಾಲೇಜ್ ಹುಡುಗಿಯರು ಹಾಗೂ ಕೆಲಸ ಕಳೆದುಕೊಂಡ ಹುಡುಗಿಯರು ಸೆಕ್ಸ್ ವರ್ಕರ್ಸ್ ಆಗಿ ಕೆಲಸ ಮಾಡ್ತಿದ್ದಾರೆ. ಇಂಗ್ಲೀಷ್ ಕಲೆಕ್ಟಿವ್ ಆಫ್ ಪ್ರಾಸ್ಟಿಟ್ಯೂಟ್ ಹೆಸರಿನ ಸಂಸ್ಥೆ, ಸಮೀಕ್ಷೆಯಲ್ಲಿ ಈ ವಿಷ್ಯವನ್ನು ಹೊರ ಹಾಕಿದೆ. ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಖರ್ಚು ಮಾಡಲು ಹಣ ಸಿಗ್ತಿಲ್ಲ. ಪಾರ್ಟ್ ಟೈಂ ಕೆಲಸ ಕಳೆದುಕೊಂಡ ಹುಡುಗಿಯರು ನ್ಯೂಡ್ ಫೋಟೋಗಳನ್ನು ಮಾರಾಟ ಮಾಡ್ತಿದ್ದಾರೆ.
ಬೋಧನಾ ಶುಲ್ಕ ಹೆಚ್ಚಳದಿಂದಾಗಿ ವಿದ್ಯಾರ್ಥಿಗಳ ಮುಂದೆ ಸಮಸ್ಯೆ ಉದ್ಭವಿಸಿದೆ. ಅರೆಕಾಲಿಕ ಉದ್ಯೋಗ ಇತ್ಯಾದಿಗಳನ್ನು ಮಾಡುವ ಮೂಲಕ ತಮ್ಮ ಖರ್ಚುಗಳನ್ನು ನೋಡಿಕೊಳ್ತಿದ್ದ ಕೆಲವು ವಿದ್ಯಾರ್ಥಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಮಾಲ್ಗಳು, ಅಂಗಡಿಗಳು ಅಥವಾ ಪಬ್-ಬಾರ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೊರೊನಾ ರೋಗದಿಂದಾಗಿ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಅಂತಹ ಪರಿಸ್ಥಿತಿಯಲ್ಲಿ ವೇಶ್ಯಾವಾಟಿಕೆ ಹಣ ಸಂಪಾದನೆಗೆ ನೆರವಾಗ್ತಿದೆ.