
ಇಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಣ ಐಪಿಎಲ್ ನ 6 ನೇ ಪಂದ್ಯ ನಡೆಯುತ್ತಿದ್ದು ಈ ಪಂದ್ಯ ತುಂಬಾ ಕುತೂಹಲಕಾರಿಯಾಗಿದೆ.
ವಿರಾಟ್ ಕೋಹ್ಲಿ ನಾಯಕತ್ವದ ಆರ್ ಸಿ ಬಿ ತಂಡ ಈಗಾಗಲೇ ಐಪಿಎಲ್ ನ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಡಿವಿಲಿಯರ್ಸ್ ಅವರ ಬ್ಯಾಟಿಂಗ್ ನಿಂದ ಆರ್ ಸಿ ಬಿ ತಂಡದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿಸಿದೆ ಬೌಲಿಂಗ್‌ನಲ್ಲೂ ಆರ್ಸಿಬಿ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ.
IPL ನಲ್ಲಿ ಹೊಸ ದಾಖಲೆ ಬರೆದ ಟಿ -20 ದೈತ್ಯ ಕ್ರಿಸ್ ಗೇಲ್ ‘ಸಿಕ್ಸರ್ ಸರದಾರ’
ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಪೈಪೋಟಿ ನೀಡುವ ಮೂಲಕ ಕೇವಲ 10 ರನ್ ಗಳಿಂದ ಸೋಲನುಭವಿಸಿತ್ತು. ಬೌಲಿಂಗ್‌ನಲ್ಲಿ ಬಾರಿ ಬಲಿಷ್ಠವಾಗಿರುವ ಈ ತಂಡಕ್ಕೆ ರಶೀದ್ ಖಾನ್ ಪ್ರಮುಖ ಅಸ್ತ್ರವಿದ್ದಂತೆ. 2016ರಂದು ಐಪಿಎಲ್ ನ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಆರ್ ಸಿ ಬಿ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಟ್ರೋಫಿ ಎತ್ತಿ ಹಿಡಿದಿತ್ತು ಇಂದಿನ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.