ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಪದ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಲಾಕ್ ಡೌನ್ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ. ಅನಗತ್ಯ ಸುದ್ದಿಗಳನ್ನು ಹರಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಅವತ್ತು ದುಡಿದು ಅವತ್ತು ಊಟ ಮಾಡುತ್ತಿರುವ ಅನೇಕ ಕುಟುಂಬಗಳಿವೆ. ಲಾಕ್ ಡೌನ್ ಮಾಡಿದರೆ ಅವರ ಸ್ಥಿತಿ ಏನಾಗಬೇಕು? ಈಗಾಗಲೇ ಆರ್ಥಿಕತೆ ದುಃಸ್ಥಿತಿಯಲ್ಲಿದೆ. ಯಾವುದೇ ಕ್ಷೇತ್ರ ಕೂಡ ಮತ್ತೊಮ್ಮೆ ಲಾಕ್ ಡೌನ್ ತಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಜನರು ಕೊರೊನಾ ಬಗ್ಗೆ ಸ್ವಯಂ ಎಚ್ಚೆತ್ತುಕೊಂಡು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಮಾಜಿ ಸಚಿವ ಯು.ಟಿ. ಖಾದರ್ ಕಾರು ಭೀಕರ ಅಪಘಾತ
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ ಡಿಸಿಎಂ, ಸಿದ್ದರಾಮಯ್ಯ ಹೇಳಿದಂತೆ ಪ್ಯಾಕೇಜ್ ಘೋಷಿಸಲು ಆಗುತ್ತಾ? ಲಾಕ್ ಡೌನ್ ಮಾಡುವುದಾದರೆ 10 ಸಾವಿರದಂತೆ ಸಂಬಳ ನೀಡಲು ಹೇಳಿದ್ದಾರೆ ಅದು ಸಾಧ್ಯವೇ? ವಿಪಕ್ಷ ನಾಯಕರು ಎಂದಾದರೂ ಉತ್ತಮ ಸಲಹೆ ನೀಡಿದ್ದಾರಾ? ಯಾವಾಗಲೂ ನೆಗೆಟಿವ್ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಲಾಕ್ ಡೌನ್ ಮಾಡಿದರೆ ಅದನ್ನೂ ಪ್ರಶ್ನೆ ಮಾಡ್ತಾರೆ. ಮಾಡಿಲ್ಲ ಅಂದ್ರೆ ಮಾಡಬೇಕು ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.