ಬ್ರಿಟನ್ ರಾಣಿ ಎಲೆಜಬೆತ್ ತಮ್ಮ ಪತಿಯ ಅಂತ್ಯಕ್ರಿಯೆ ಎಲ್ಲಾ ಪ್ರಕ್ರಿಯೆಗಳನ್ನ ಪೂರೈಸಿ ನಾಲ್ಕು ದಿನಗಳ ಬಳಿಕ ಇದೀಗ ರಾಜವಂಶದ ಕರ್ತವ್ಯಕ್ಕೆ ವಾಪಸ್ ಆಗಿದ್ದಾರೆ.
99 ವರ್ಷದ ಪ್ರಿನ್ಸ್ ಫಿಲಿಪ್ ವಯೋಸಹಜ ಕಾಯಿಲೆಯಿಂದ ಶುಕ್ರವಾರ ನಿಧನರಾಗಿದ್ದರು. ಈ ರಾಜವಂಶಸ್ಥ ದಂಪತಿ ಬರೋಬ್ಬರಿ 69 ವರ್ಷದ ದಾಂಪತ್ಯ ಜೀವನ ನಡೆಸಿದ್ದರು. ಶನಿವಾರ ಪ್ರಿನ್ಸ್ ಫಿಲಿಪ್ರ ಅಂತ್ಯಕ್ರಿಯೆಯನ್ನ ನಡೆಸಲಾಗಿತ್ತು.
ಪ್ರಿನ್ಸ್ ಫಿಲಿಪ್ 1947ರಲ್ಲಿ ರಾಣಿ ಎಲಿಜಬೆತ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿ ರಾಣಿ ಎಲೆಜೆಬೆತ್ ರಾಜವಂಶಸ್ಥ ಕರ್ತವ್ಯಗಳಿಂದ ದೂರವೇ ಇದ್ದರು. ತಮ್ಮ ಮಗ ವಿಲಿಯಂ ಹಾಗೂ ಅನೇಕ ಹಿರಿಯ ರಾಜವಂಶಸ್ಥರಿಗೆ ಕರ್ತವ್ಯಗಳನ್ನ ಹಂಚಿದ್ದರು. ರಾಣಿ ಈಗಲೂ ಪಾರ್ಲಿಮೆಂಟ್ ಪ್ರಾರಂಭ ಮಾಡುವಂತಹ ಸಾಂಕೇತಿಕ ಕರ್ತವ್ಯಗಳನ್ನ ಮಾತ್ರ ನಿರ್ವಹಿಸುತ್ತಿದ್ದಾರೆ.
ಫಿಲಿಪ್ರ ಮರಣದಿಂದ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದರೂ ಸಹ ಇದರಿಂದ ರಾಜವಂಶಸ್ಥ ಕುಟುಂಬದ ಕರ್ತವ್ಯಗಳಿಗೆ ಧಕ್ಕೆ ಆಗೋದಿಲ್ಲ ಎಂದು ಹೇಳಿದೆ. ಫಿಲಿಪ್ ವಿಶ್ವದ ಅತ್ಯಂತ ಹಿರಿಯ ಜೀವಂತವಿರುವ ರಾಜ ಎಂಬ ಕೀರ್ತಿಗೆ ಪಾತ್ರರಾಗಿದ್ದರು, ತಮ್ಮ ಪುತ್ರ ಹಾಗೂ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ಗಾಗಿ ಅವರು ಸಿಂಹಾಸನವನ್ನ ತ್ಯಜಿಸಿದ್ದರು.