alex Certify ಸಾರ್ವಜನಿಕರಿಗೆ ಗುಡ್‌ ನ್ಯೂಸ್: ಮನೆಯಲ್ಲೇ ಕುಳಿತು ಪಡೆಯಿರಿ ಚಾಲನಾ ಪರವಾನಗಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರಿಗೆ ಗುಡ್‌ ನ್ಯೂಸ್: ಮನೆಯಲ್ಲೇ ಕುಳಿತು ಪಡೆಯಿರಿ ಚಾಲನಾ ಪರವಾನಗಿ..!

ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಕೆಲಸಗಳು ಅರ್ಧಕ್ಕೆ ನಿಲ್ಲುತ್ತಿವೆ. ಚಾಲನಾ ಪರವಾನಗಿ ಪಡೆಯಲು ಮುಂದಾದವರು ಅಥವಾ ಅದನ್ನು ನವೀಕರಿಸುವವರಿಗೂ ಚಿಂತೆ ಕಾಡ್ತಿದೆ. ನೀವು ಇವ್ರಲ್ಲಿ ಒಬ್ಬರಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ. ಆರ್ಟಿಒ ಕಚೇರಿಗೆ ಹೋಗದೆ, ಮನೆಯಲ್ಲೇ ಕುಳಿತು ನೀವು ಈ ಕೆಲಸವನ್ನು ಮಾಡಬಹುದು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿ ರಚನೆ ಮತ್ತು ನವೀಕರಣಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಹೊಸ ನಿಯಮದ ಪ್ರಕಾರ, ಕಲಿಕಾ ಪರವಾನಗಿ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯಲಿದೆ. ಅಪ್ಲಿಕೇಶನ್‌ನಿಂದ ಹಿಡಿದು ಪರವಾನಗಿ ಮುದ್ರಣದವರೆಗಿನ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ಆಗಲಿದೆ. ಹೊಸ ವಾಹನಗಳ ನೋಂದಣಿಯನ್ನೂ ಸುಲಭಗೊಳಿಸಲಾಗಿದೆ. ಆರ್ ಸಿ ನವೀಕರಣವನ್ನು ಈಗ 60 ದಿನಗಳ ಮುಂಚಿತವಾಗಿ ಮಾಡಬಹುದು. ತಾತ್ಕಾಲಿಕ ನೋಂದಣಿ ಮಿತಿಯನ್ನು ಕೂಡ ಒಂದು ತಿಂಗಳಿಂದ 6 ತಿಂಗಳಿಗೆ ವಿಸ್ತರಿಸಲಾಗಿದೆ.

ಇದಲ್ಲದೆ ಚಾಲನ ಪರವಾನಗಿ ಪಡೆಯಲು ನೀವು ಆರ್ಟಿಒಗೆ ಹೋಗಬೇಕಾಗಿಲ್ಲ. ಟ್ಯುಟೋರಿಯಲ್ ಮೂಲಕ ಮನೆಯಲ್ಲೇ ಮಾಡಬಹುದು. ಕೊರೊನಾದಿಂದಾಗಿ ಈ ಸೇವೆ ಸ್ವಲ್ಪ ನೆಮ್ಮದಿ ನೀಡಿದೆ. ಹೆಚ್ಚುತ್ತಿರುವ ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಮೋಟಾರು ವಾಹನ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಸರ್ಟಿಫಿಕೇಟ್ ನವೀಕರಣ ಅವಧಿಯನ್ನು ಜೂನ್ 20, 2021ರವರೆಗೆ ವಿಸ್ತರಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...