alex Certify ಕಿವಿ ನೋವಿನ ಜೊತೆ ಈ ಲಕ್ಷಣಗಳಿದ್ದರೆ ಇರಲಿ ʼಎಚ್ಚರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿವಿ ನೋವಿನ ಜೊತೆ ಈ ಲಕ್ಷಣಗಳಿದ್ದರೆ ಇರಲಿ ʼಎಚ್ಚರʼ

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಆರಂಭವಾಗಿದೆ. ಪ್ರತಿ ನಿತ್ಯ ಲಕ್ಷಕ್ಕೂ ಅಧಿಕ ಸೋಂಕಿನ  ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದರ ಜೊತೆಗೆ ಏರಿಕೆಯಾಗುತ್ತಿರುವ ಸಾವಿನ ಸಂಖ್ಯೆಯೂ ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ವೈರಸ್ ಲಕ್ಷಣಗಳು ವೈದ್ಯರಿಗೆ ಸವಾಲಾಗಿದೆ. ಕೊರೊನಾ ವೈರಸ್ ಲಕ್ಷಣಗಳಲ್ಲಿ ದಿನಕ್ಕೊಂದು ಬದಲಾವಣೆ ಕಾಣ್ತಿದೆ. ಸಾಮಾನ್ಯ ಜ್ವರ ಬಂದ್ರೂ ಜನರು ಭಯಪಡುವಂತಾಗಿದೆ. ಹಾಗೆ ಕಿವಿನೋವು ಕಾಣಿಸಿಕೊಂಡರೂ ಜನರಿಗೆ ಕೊರೊನಾ ಭಯ ಶುರುವಾಗುತ್ತದೆ.

ಬರೀ ಕಿವಿ ನೋವು ಕಾಣಿಸಿಕೊಂಡರೆ ಅದು ಕೊರೊನಾ ಲಕ್ಷಣವಲ್ಲ. ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಜೊತೆ ಕಿವಿ ನೋವು ಕಾಣಿಸಿಕೊಂಡರೆ ಅದು ಕೊರೊನಾ ಲಕ್ಷಣವೆಂದು ವೈದ್ಯರು ಹೇಳುತ್ತಾರೆ.

ಕಿವಿ ನೋವಿಗೆ ದವಡೆಯ ಸಂಧಿವಾತ, ಕಿವಿ ಸೋಂಕು, ಗಾಯ ಅಥವಾ ಕಿವಿಯಲ್ಲಿ ಸಿಕ್ಕಿಬಿದ್ದ ಹುಳ, ಕಸ, ಹಲ್ಲುನೋವು, ಕಿವಿಗೆ ನೀರು ಹೋದಾಗ ಹೀಗೆ ಅನೇಕ ಕಾರಣಗಳಿರುತ್ತವೆ. ಕೆಲವೊಮ್ಮೆ ಶೀತಕ್ಕೂ ಕಿವಿನೋವು ಕಾಣಿಸುತ್ತದೆ.

ಸಾಮಾನ್ಯ ಕಿವಿ ನೋವು ಕಾಣಿಸಿದ್ರೆ ಭಯಬೇಡ. ಕೊರೊನಾ ಲಕ್ಷಣಗಳ ಜೊತೆ ಕಿವಿನೋವು ಕಾಣಿಸಿಕೊಂಡರೆ ಮಾತ್ರ ವೈದ್ಯರನ್ನು ಭೇಟಿ ಮಾಡುವಂತೆ ಸಲಹೆ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...