ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತಡೆಗೆ ಮೇ 1 ರವರೆಗೆ ಲಾಕ್ ಡೌನ್ ಮಾದರಿ ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ.
ಏಪ್ರಿಲ್ 14 ರಿಂದ ಸೆಕ್ಷನ್ 144 ರನ್ವಯ ನಿಷೇದಾಜ್ಞೆ ಹೇರಲಾಗಿದ್ದು, ಅಗತ್ಯ ಸೇವೆ, ಮುಂಬೈ ಉಪನಗರ ರೈಲು ಸೇವೆ, ಸಾರ್ವಜನಿಕ ಸಾರಿಗೆ ಲಭ್ಯವಿರುತ್ತದೆ. ಅಗತ್ಯ ಸೇವೆ ಹೊರತಾಗಿ ಅನಗತ್ಯವಾಗಿ ಸಂಚರಿಸಲು ಅನುಮತಿ ಇರುವುದಿಲ್ಲ. ಕೊರೊನಾ ಸೋಂಕು ತಡೆಗೆ ಜನ ನಿಯಮಗಳನ್ನು ಪಾಲಿಸಬೇಕು ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಮಂಗಳವಾರ ಮಹಾರಾಷ್ಟ್ರದಲ್ಲಿ 60,212 ಜನರಿಗೆ ಸೋಂಕು ತಗುಲಿದ್ದು, 281 ಮಂದಿ ಮೃತಪಟ್ಟಿದ್ದಾರೆ.