alex Certify ಬೆಚ್ಚಿಬೀಳಿಸುವ ಸಂಗತಿ ಬಹಿರಂಗ: ವರದಿ ʼನೆಗೆಟಿವ್ʼ ಆಗಿದ್ರೂ ರಹಸ್ಯವಾಗಿ ಕಾಡುತ್ತೆ ಕೊರೊನಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವ ಸಂಗತಿ ಬಹಿರಂಗ: ವರದಿ ʼನೆಗೆಟಿವ್ʼ ಆಗಿದ್ರೂ ರಹಸ್ಯವಾಗಿ ಕಾಡುತ್ತೆ ಕೊರೊನಾ..!

ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚು ಸಾಂಕ್ರಾಮಿಕವಾಗಿದೆ ಎಂಬ ಸಂಗತಿ ಬಹಿರಂಗವಾಗಿದೆ. ಇದ್ರ ಬೆನ್ನಲ್ಲೆ ಇನ್ನೊಂದು ಆಘಾತಕಾರಿ ಸಂಗತಿ ಹೊರಗೆ ಬಿದ್ದಿದೆ. ಕೊರೊನಾ ವೈರಸ್ ಈಗ ಜನರ ಮೇಲೆ ರಹಸ್ಯವಾಗಿ ದಾಳಿ ಮಾಡ್ತಿದೆ. ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರೂ ಕೊರೊನಾ ವರದಿ ನೆಗೆಟಿವ್ ಬರ್ತಿದೆ. ಆದ್ರೆ ವರದಿ ನೆಗೆಟಿವ್ ಆದ್ಮೇಲೂ ನೀವು ಅನಾರೋಗ್ಯಕ್ಕೆ ತುತ್ತಾಗಬಹುದೆಂದು ವೈದ್ಯರು ಹೇಳಿದ್ದಾರೆ.

ದೆಹಲಿಯ ಆಕಾಶ್ ಹೆಲ್ತ್ ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಚೌಧರಿ ಆಸ್ಪತ್ರೆಗೆ ಬಂದ ಕೆಲ ರೋಗಿಗಳಲ್ಲಿ ಜ್ವರ, ಕಫ, ಉಸಿರಾಟದ ಸಮಸ್ಯೆ ಸೇರಿದಂತೆ ಕೊರೊನಾದ ಲಕ್ಷಣ ಕಾಣಿಸಿಕೊಂಡಿದೆ. ಶ್ವಾಸಕೋಶದಲ್ಲಿ ಸೌಮ್ಯವಾದ ತೇಪೆ ಕಾಣಿಸಿಕೊಂಡಿದೆ. ಇದನ್ನು Patchy ground glass opacity ಎಂದು ಕರೆಯಲಾಗುತ್ತದೆ. ಇದು ಕೊರೊನಾದ ವಿಶೇಷ ಲಕ್ಷಣವಾಗಿದೆ.

ಇದರ ಹೊರತಾಗಿಯೂ ಕೊರೊನಾ ವರದಿಯಲ್ಲಿ ನೆಗೆಟಿವ್ ಬಂದಿದೆ. ಕೆಲ ರೋಗಿಗಳಿಗೆ Bronchoalveolar lavage ಪರೀಕ್ಷೆ ಮಾಡಿಸಲಾಗಿದೆ. ಮೂಗಿನ ಮೂಲಕ ಶ್ವಾಸಕೋಶಕ್ಕೆ ಸಣ್ಣ ಟ್ಯೂಬ್ ಹಾಕುವ ಮೂಲಕ ಶ್ವಾಸಕೋಶದ ದ್ರವವನ್ನು ಪರೀಕ್ಷೆ ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಕೊರೊನಾ ವರದಿ ಪಾಸಿಟಿವ್ ಬಂದಿದೆ.

ಸಾಮಾನ್ಯವಾಗಿ ಆರ್ ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬರ್ತಿದ್ದಂತೆ ಅವರನ್ನು ಸಾಮಾನ್ಯ ವಾರ್ಡ್ ಗೆ ಹಾಕಲಾಗುತ್ತದೆ. ಆದ್ರೆ ಈ ರೋಗಿಗಳು ಕೊರೊನಾ ಹರಡುತ್ತಾರೆ. ಈ ರೋಗಿಗಳಿಗೆ ವೈರಸ್ ಮೂಗು ಅಥವಾ ಬಾಯಿಯಿಂದ ದೇಹ ಸೇರಿಲ್ಲ. ಹಾಗಾಗಿ ಆರ್ ಟಿ-ಪಿಸಿಆರ್ ಪರೀಕ್ಷೆಯ ವರದಿ ನೆಗೆಟಿವ್ ಬರ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...