ಕೋವಿಡ್ ಸಾಂಕ್ರಮಿಕದ ಕಾರಣ ಎಲ್ಲರೂ ತಮ್ಮ ಮನೆಯ ಕೆಲಸಗಳನ್ನು ಸಾಧ್ಯವಾದಷ್ಟು ತಾವೇ ಮಾಡಿಕೊಳ್ಳುವಂತೆ ಆಗಿಬಿಟ್ಟಿದೆ. ಕೆಲವು ಮಂದಿ ಆನ್ಲೈನ್ ವಿಡಿಯೋಗಳನ್ನು ನೋಡಿಕೊಂಡು ಲನಿಂಗ್, ಗಾರ್ಡನಿಂಗ್, ಅಡುಗೆ, ಮನೆಯ ಕ್ಲೀನಿಂಗ್ ಎಲ್ಲವನ್ನೂ ತಾವೇ ಮಾಡಿ ನೋಡಲು ಮುಂದಾಗುತ್ತಿದ್ದಾರೆ.
ಇಂಥದ್ದೇ ಒಂದು ಪ್ರಯತ್ನಕ್ಕೆ ಮುಂದಾದ ವ್ಯಕ್ತಿಯೊಬ್ಬರು ತಮ್ಮ ಮನೆಯ ಕೆಲಸವೊಂದನ್ನು ಖುದ್ದು ಮಾಡಲು ಮುಂದಾದಾಗ ತಳ್ಳುಗಾಡಿಯೊಂದನ್ನು ತಮ್ಮ ಮೇಲೆ ತಾವೇ ಎತ್ತಿ ಹಾಕಿಕೊಂಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿ, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೋಷಕರೇ ಎಚ್ಚರ: ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ ಕೊರೊನಾ ಎರಡನೇ ಅಲೆ
ರ‍್ಯಾಂಪ್ ಒಂದನ್ನು ದಾಟುವ ವೇಳೆ ತಳ್ಳುಗಾಡಿಯ ಮೇಲಿದ್ದ ಮಣ್ಣೆಲ್ಲಾ ಆತನ ಮೇಲೆ ಬೀಳುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಅಲೆನ್ ಹಾರ್ಕರ್ ಹೆಸರಿನ 54 ವರ್ಷದ ಈ ವ್ಯಕ್ತಿ ಬ್ರಿಟನ್‌ನವರಾಗಿದ್ದು, ತಮ್ಮ ಮನೆಯ ಲಾನ್ ಅನ್ನು ಸಮ ಮಾಡುವ ಕೆಲಸದ ವೇಳೆ ಹೆಚ್ಚುವರಿ ಮಣ್ಣನ್ನು ತೆರವುಗೊಳಿಸಲು ಯತ್ನಿಸುತ್ತಿದ್ದರು.