alex Certify ಜಾಲಿ ಮೂಡ್​​ನಲ್ಲಿ ಬಾಲಿವುಡ್​ ನಟಿ ಸಾರಾ ಅಲಿ ಖಾನ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಲಿ ಮೂಡ್​​ನಲ್ಲಿ ಬಾಲಿವುಡ್​ ನಟಿ ಸಾರಾ ಅಲಿ ಖಾನ್​…!

ಸೈಫ್​ ಅಲಿ ಖಾನ್​ ಪುತ್ರಿ ಬಾಲಿವುಡ್​ ನಟಿ ಸಾರಾ ಅಲಿ ಖಾನ್ ಕಾಶ್ಮೀರದಲ್ಲಿ ತಮ್ಮ ಕುಟುಂಬಸ್ಥರ ಜೊತೆ ಎಂಜಾಯ್​ ಮಾಡ್ತಿದ್ದಾರೆ. ತಾಯಿ ಅಮೃತಾ ಸಿಂಗ್​ ಹಾಗೂ ಸಹೋದರ ಇಬ್ರಾಹಿಂ ಅಲಿ ಖಾನ್​ ಜೊತೆ ಗೊಂಡಾಲಾ ರೈಡ್​ನ್ನು ಸಾರಾ ಎಂಜಾಯ್​ ಮಾಡಿದ್ದಾರೆ.

ಕುಟುಂಬಸ್ಥರ ಜೊತೆ ಪರ್ವತಾರೋಹಣದ ವಿಡಿಯೋ ಹಾಗೂ ಫೋಟೋಗಳನ್ನ ಶೇರ್​ ಮಾಡಿದ್ದ ನಟಿ ಇದೀಗ ಬೆಚ್ಚನೆಯ ನೀರಿನಲ್ಲಿ ಸ್ವಿಮ್ಮಿಂಗ್​ ಎಂಜಾಯ್​ ಮಾಡಿದ್ದಾರೆ. ಬೆಳಗ್ಗಿನ ಉಪಹಾರಕ್ಕೆ ವ್ಯಾಫಲ್​ಗಳನ್ನ ಸೇವಿಸುದ ಮೂಲಕ ಸಖತ್​ ಚಿಲ್​ ಮಾಡ್ತಿದ್ದಾರೆ.

ಸೋಮವಾರ ಸಂಜೆ ಸಾರಾ ಶೇರ್​ ಮಾಡಿದ ಫೋಟೊಗಳಲ್ಲಿ ಒಂದರಲ್ಲಿ ವ್ಯಾಫಲ್​​ಗಳಿದ್ದರೆ ಮತ್ತೊಂದು ಕಡೆ ಪರ್ವತಗಳ ನೋಟ ಹಾಗೂ ಹಾಟ್​ ವಾಟರ್​ ಪೂಲ್​​ಗಳನ್ನ ಕಾಣಬಹುದಾಗಿದೆ.

ಸೋಮವಾರ ಸಾರಾ ಶೇರ್​ ಮಾಡಿದ ವಿಡಿಯೋವೊಂದರಲ್ಲಿ ಅವರು ವರದಿಗಾರರಂತೆ ಮಾತನಾಡಿದ್ದಾರೆ. ತಮ್ಮ ಕಾಶ್ಮೀರ ಪ್ರವಾಸದ ಬಗ್ಗೆ ವರದಿಗಾರರ ರೀತಿಯಲ್ಲಿ ವಿಮರ್ಶೆ ಮಾಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

https://www.instagram.com/p/CNfDoMtpV2H/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...