alex Certify ರಾಜಕಾರಣಿಗಳ ವರ್ತನೆ ವಿರುದ್ಧ ಪ್ರಧಾನಿಗೆ ವೈದ್ಯರ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕಾರಣಿಗಳ ವರ್ತನೆ ವಿರುದ್ಧ ಪ್ರಧಾನಿಗೆ ವೈದ್ಯರ ದೂರು

ರಾಜಕಾರಣಿಗಳ ಮನೆಗೆ ಹೋಗಿ ಚಿಕಿತ್ಸೆ ನೀಡುವುದು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿನ ವಿಐಪಿ ಸಂಸ್ಕೃತಿಯನ್ನ ಬಂದ್​ ಮಾಡುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ.

ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಯಾವುದೇ ಸೌಲಭ್ಯಗಳಿಲ್ಲ. ಆದರೆ ಚುನಾವಣಾ ರ್ಯಾಲಿಗಳನ್ನ ನಡೆಸಿ ಕೊರೊನಾ ವೈರಸ್​ ಹರಡುವಿಕೆಗೆ ಕಾರಣರಾದ ರಾಜಕಾರಣಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಚಿಕಿತ್ಸೆಯಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆಗೆ ವಿಐಪಿ ಕೌಂಟರ್​ ಇಡಲಾಗಿದೆ. ಇಲ್ಲಿ ಸಚಿವರು, ರಾಜಕಾರಣಿಗಳು ಸೇರಿದಂತೆ ಎಲ್ಲಾ ಪಕ್ಷದ ಕಾರ್ಯಕರ್ತರು ಪರೀಕ್ಷೆ ಮಾಡಿಸಿಕೊಳ್ತಾರೆ. ಆದರೆ ವೈದ್ಯರಿಗೆ ಈ ರೀತಿಯ ಯಾವುದೇ ಪ್ರತ್ಯೇಕ ಕೌಂಟರ್​ ಇಲ್ಲ ಎಂದೂ ಉಲ್ಲೇಖಿಸಲಾಗಿದೆ.

ವೈದ್ಯಕೀಯವಾಗಿ ಈ ರೀತಿಯ ಸೂಚನೆ ಇಲ್ಲದೇ ಇದ್ದರೂ ಸಹ ಬಹುತೇಕ ಎಲ್ಲಾ ರಾಜಕಾರಣಿಗಳು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ವೈದ್ಯರನ್ನ ಮನೆಗೆ ಕರೆಸಿಕೊಳ್ತಿದ್ದಾರೆ ಎಂದು ದೂರಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...