ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 1.61 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1.36 ಕೋಟಿಗೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಫುಟ್ನಿಕ್-ವಿ-ವ್ಯಾಕ್ಸಿನ್ ಗೆ ಇದೀಗ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ ಅನುಮತಿ ನೀಡಿದ್ದು, ಲಸಿಕೆ ನೀಡಿಕೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ.
ದೇಶದಲ್ಲಿ ಕೋವಿಡ್ ಲಸಿಕೆ ಉತ್ಸವ ಆರಂಭವಾಗಿದ್ದರೂ ಕೂಡ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿವೆ. ಈ ನಡುವೆ ಸ್ಫುಟ್ನಿಕ್-ವಿ-ವ್ಯಾಕ್ಸಿನ್ ಗೆ ಅನುಮತಿ ಸಿಕ್ಕಿರುವುದು ಲಸಿಕೆಗೆ ಇನ್ನಷ್ಟು ವೇಗ ದೊರೆತಂತಾಗಿದೆ. ಇದು ಕೊರೊನಾ ಮಹಾಮಾರಿಗೆ ಭಾರತದಲ್ಲಿ ಬಳಸಲಾಗುತ್ತಿರುವ ಮೂರನೆ ಲಸಿಕೆಯಾಗಿದೆ.
ಬಾರುಗಳ ಮುಂದೆ ಸಾಲುಗಟ್ಟಿ ನಿಂತ ’ಬೀರ್’ಬಲ್ಲರು
ಈಗಾಗಲೇ ಹಲವು ದೇಶಗಳಲ್ಲಿ ಸ್ಫುಟ್ನಿಕ್-ವಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಹೀಗಾಗಿ ಭಾರತದಲ್ಲೂ ಈ ವ್ಯಾಕ್ಸಿನ್ ಗೆ ಅನುಮತಿ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಈಗ ಸಬ್ಜೆಕ್ಟ್ ಎಕ್ಸ್ ಪರ್ಟ್ ಕಮಿಟಿ ಸ್ಫುಟ್ನಿಕ್-ವಿ ಗೆ ಅನುಮತಿ ನೀಡಿದೆ.