alex Certify ಬೇಸಿಗೆಯಲ್ಲಿ ಈ ಹಣ್ಣುಗಳನ್ನ ಸೇವಿಸಿ ಪರಿಣಾಮ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಈ ಹಣ್ಣುಗಳನ್ನ ಸೇವಿಸಿ ಪರಿಣಾಮ ನೋಡಿ

ಬೇಸಿಗೆ ಕಾಲವಂತೂ ಶುರುವಾಗಿಬಿಟ್ಟಿದೆ. ಈ ಕಾಲದಲ್ಲಿ ನೀವು ತಿನ್ನುವ ಹಾಗೂ ಕುಡಿಯುವ ಪದಾರ್ಥಗಳಲ್ಲಿ ಮಾಡುವ ಚಿಕ್ಕ ಅಜಾಗರೂಕತೆಯೂ ನಿಮ್ಮ ಆರೋಗ್ಯದ ಮೇಲೆ ಬಹು ಬೇಗನೆ ಪರಿಣಾಮ ಬೀರಬಲ್ಲುದು. ಬೇಸಿಗೆಯಲ್ಲಿ ಆದಷ್ಟು ಹೆಚ್ಚು ನೀರಿನ ಅಂಶವನ್ನ ಹೊಂದಿರುವ ಪದಾರ್ಥಗಳನ್ನೇ ಸೇವನೆ ಮಾಡಬೇಕು. ಇದರಿಂದ ನಿಮ್ಮ ದೇಹ ಹೈಡ್ರೇಟ್​ ಆಗಿರೋದ್ರ ಜೊತೆಗೆ ನಿಮ್ಮ ತೂಕ ಕೂಡ ಕಂಟ್ರೋಲ್​​ನಲ್ಲಿ ಇರುತ್ತೆ.

ಕಲ್ಲಂಗಡಿ ಹಣ್ಣು : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ತುಂಬಾನೇ ಒಳ್ಳೆಯದು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವಿದೆ. ಇದರಲ್ಲಿ ಕ್ಯಾಲೋರಿ ಅಂಶ ಕೂಡ ಕಡಿಮೆ ಇರೋದ್ರಿಂದ ತೂಕ ಇಳಿಕೆ ಮಾಡೋರಿಗೆ ಹೆಚ್ಚು ಉಪಯುಕ್ತ.

ಕರಬೂಜ ಹಣ್ಣು : ಕರಬೂಜ ಹಣ್ಣಿನಲ್ಲೂ ನೀರಿನ ಅಂಶ ಹೆಚ್ಚು ಹಾಗೂ ಕೊಬ್ಬಿನ ಅಂಶ ತುಂಬಾನೇ ಕಡಿಮೆ ಇರುತ್ತೆ. ನೀವು ತೂಕ ಇಳಿಕೆ ಮಾಡುವ ಪ್ರಯತ್ನದಲ್ಲಿದ್ದರೆ ನಿಮ್ಮ ಡಯಟ್​ ಲಿಸ್ಟ್​​ನಲ್ಲಿ ಕರಬೂಜವನ್ನ ಸೇರಿಸಿಕೊಳ್ಳೋಕೆ ಮರೆಯದಿರಿ. ಇದರಲ್ಲಿ ವಿಟಾಮಿನ್​ ಎ, ಸಿ ಹಾಗೂ ಬಿ 6 ಅಂಶವಿದೆ. ಇದು ಮಾತ್ರವಲ್ಲದೇ ಮೆಗ್ನೀಷಿಯಂ ಹಾಗೂ ಫೈಬರ್ ಅಂಶ ಕೂಡ ಇದೆ.

ಅನಾನಸ್​ ಹಣ್ಣು : ಅನಾನಸ್​ನಲ್ಲೂ ಕ್ಯಾಲರಿ ಅಂಶ ತುಂಬಾನೇ ಕಡಿಮೆ ಇರುತ್ತೆ. ಹಾಗೂ ಫೈಬರ್​ ಮತ್ತು ವಿಟಾಮಿನ್​ ಸಿ ಅಂಶ ಅಗಾಧ ಪ್ರಮಾಣದಲ್ಲಿರುತ್ತೆ. ಇದು ನಿಮ್ಮ ಹೊಟ್ಟೆಯಲ್ಲಿನ ಕೊಬ್ಬನ್ನ ಕರಗಿಸೋಕೆ ತುಂಬಾನೇ ಒಳ್ಳೆಯದು. ಜೀರ್ಣಶಕ್ತಿ ಹೆಚ್ಚಿಸುವ ಕಾರ್ಯವನ್ನೂ ಅನಾನಸ್​ ಮಾಡುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...