ಕೊರೊನಾ ಹೆಚ್ಚಾಗ್ತಿದ್ದಂತೆ ಲಸಿಕೆ ಕೊರತೆ ಎದುರಾಗ್ತಿದೆ. ಫಿಲಿಪೈನ್ಸ್ ನಲ್ಲಿ ಕೊರೊನಾ ಲಸಿಕೆ ಕೊರತೆಯಿಂದ ಬಳಲುತ್ತಿರುವ ಜನರು ಕುದುರೆ ಔಷಧಿಯನ್ನು ಬಳಸ್ತಿದ್ದಾರೆ. ಕುದುರೆಗೆ ಬಳಸುವ Ivermectin ಬಳಸುತ್ತಿದ್ದಾರೆ. ಇದನ್ನು ರಾಜಕಾರಣಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಇದನ್ನೇ ಕೊರೊನಾ ಔಷಧಿ ಎನ್ನುತ್ತಿದ್ದಾರೆ.
ಫಿಲಿಪೈನ್ಸ್ ನಲ್ಲಿ Ivermectin ಔಷಧಿಯ ಅಡ್ಡಪರಿಣಾಮದ ಬಗ್ಗೆ ಜನರು ಆಲೋಚಿಸುತ್ತಿಲ್ಲ. ಕೊರೊನಾ ಒತ್ತಡದಲ್ಲಿರುವ ಜನರು ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಲು ಈ ಔಷಧಿ ಬಳಸುತ್ತಿದ್ದಾರೆ. ಈ ಔಷಧಿಗೆ ಮಾರ್ಚ್ ನಲ್ಲಿ ಶೇಕಡಾ 700 ಪಟ್ಟು ಬೇಡಿಕೆ ಹೆಚ್ಚಾಗಿದೆ. ಆನ್ಲೈನ್ ನಲ್ಲಿ ಜನರು ಇದನ್ನು ಸರ್ಚ್ ಮಾಡ್ತಿದ್ದಾರೆ.
ಮಾನವನ ಬಳಕೆಗೆ ಈ ಔಷಧಿ ನೀಡುವುದು ಕಾನೂನು ಬಾಹಿರ. ಆದ್ರೆ ಕಾನೂನು ಉಲ್ಲಂಘಿಸಿ ಜನರು ಈ ಔಷಧಿ ಮಾರಾಟ ಮಾಡ್ತಿದ್ದಾರೆ. ಫಿಲಿಪೈನ್ಸ್ ನಲ್ಲಿ ಮಾತ್ರವಲ್ಲ ಯಾವ ದೇಶದಲ್ಲೂ ಈ ಔಷಧಿಯನ್ನು ಮನುಷ್ಯರ ಬಳಕೆಗೆ ಒಪ್ಪಿಗೆ ನೀಡಲಾಗಿಲ್ಲ. ಈ ಔಷಧಿ ಕೊರೊನಾದಿಂದ ನಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆಯಲ್ಲಿ ಅನೇಕರಿದ್ದಾರೆ. ಇದೇ ಕಾರಣಕ್ಕೆ ಸರ್ಕಾರದ ಆದೇಶ ಉಲ್ಲಂಘಿಸಿ ಇದ್ರ ಸೇವನೆ ಮಾಡ್ತಿದ್ದಾರೆ. ಈ ಔಷಧಿಯನ್ನು ಬೆಕ್ಕುಗಳು, ನಾಯಿಗಳು, ಕುದುರೆಗಳು, ಹಸುಗಳು ಮತ್ತು ಹಂದಿಗಳಿಗೆ ನೀಡಲಾಗುತ್ತದೆ.