ಕೊರೊನಾದಿಂದ ಗುಣಮುಖರಾದ ಅಕ್ಷಯ್ ಕುಮಾರ್ ಮನೆಗೆ ವಾಪಸ್ 12-04-2021 5:48PM IST / No Comments / Posted In: Corona, Corona Virus News, Featured News, Entertainment ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೀಗ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಪತ್ನಿ ಹಾಗೂ ಲೇಖಕಿ ಟ್ವಿಂಕಲ್ ಖನ್ನಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಗುಡ್ ನ್ಯೂಸ್ನ್ನು ಶೇರ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ತಮ್ಮ ಏಕವರ್ಣೀಯ ವ್ಯಂಗ್ಯಚಿತ್ರವನ್ನ ಶೇರ್ ಮಾಡಿರುವ ಟ್ವಿಂಕಲ್ ಖನ್ನಾ, ಅಕ್ಕಿ ಕೊನೆಗೂ ಮನೆಗೆ ವಾಪಸ್ಸಾಗಿದ್ದಾರೆ. ಸುರಕ್ಷಿತವಾಗಿ ಅಕ್ಷಯ್ ಖನ್ನಾ ಮನೆಗೆ ವಾಪಸ್ಸಾಗಿದ್ದಕ್ಕೆ ಖುಷಿಯಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಟ್ವಿಂಕಲ್ ಖನ್ನಾರ ಈ ಪೋಸ್ಟ್ಗೆ ಹುಮಾ ಖುರೇಷಿ ಸೇರಿದಂತೆ ಸಾಕಷ್ಟು ಬಾಲಿವುಡ್ ತಾರೆಯರು ಕಮೆಂಟ್ ಮೂಲಕ ಸಂತಸ ಹೊರಹಾಕಿದ್ದಾರೆ. ರಾಮ್ ಸೇತು ಸಿನಿಮಾಗಾಗಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನುಶ್ರತ್ ಭರುಚ್ಚಾ ಜೊತೆ ಶೂಟಿಂಗ್ನಲ್ಲಿದ್ದ ವೇಳೆ ಅಕ್ಷಯ್ ಕುಮಾರ್ ಸೋಂಕಿಗೆ ಒಳಗಾಗಿದ್ದಾರೆ. ನಾನು ಹೋಂ ಕ್ವಾರಂಟೈನ್ನಲ್ಲಿದ್ದೇನೆ ಹಾಗೂ ಸೂಕ್ತ ವೈದ್ಯಕೀಯ ಸಲಹೆಯನ್ನ ಪಡೆಯುತ್ತಿದ್ದೇನೆ. ಆದಷ್ಟು ಬೇಗ ವಾಪಸ್ಸಾಗುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಕ್ಕಿ ಹೇಳಿಕೊಂಡಿದ್ದರು. View this post on Instagram A post shared by Twinkle Khanna (@twinklerkhanna)