ಎಡಿನ್‌ಬರ್ಗ್‌ನ ಡ್ಯೂಕ್ ಮತ್ತು ರಾಣಿ ಎಲಿಜಬೆತ್ 2ರ ಪತಿ ಯುವರಾಜ ಪ್ರಿನ್ಸ್ ಫಿಲಿಪ್ ತಮ್ಮ 99ನೇ ವಯಸ್ಸಿನಲ್ಲಿ ತಮ್ಮ ವಿಂಡ್ಸರ್ ಕ್ಯಾಸಲ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಡ್ಯೂಕ್ ಸಾವಿಗೆ ಕಂಬನಿ ಮಿಡಿದ ಬಂಕಿಂಗ್‌ಹ್ಯಾಮ್ ಅರಮನೆ, “ಮಹಾರಾಣಿಯವರು ಬಹಳ ನೋವಿನಿಂದ ತಮ್ಮ ಪ್ರೀತಿಯ ಪತಿ, ಎಡಿನ್‌ಬರ್ಗ್‌ನ ಡ್ಯೂಕ್, ರಾಜ ಫಿಲಿಪ್‌ರ ಸಾವನ್ನು ಘೋಷಿಸಿದ್ದಾರೆ. ಜಗತ್ತಿನ ನಾನಾ ಮೂಲೆಗಳಿಂದ ಯುವರಾಜನ ನಿಧನಕ್ಕೆ ಸಂತಾಪ ವ್ಯಕ್ತವಾಗಿದೆ.
ಇದೇ ವೇಳೆ ದಕ್ಷಿಣ ಪೆಸಿಫಿಕ್ ಪ್ರದೇಶದ ದ್ವೀಪವೊಂದರ ಬುಡಕಟ್ಟು ಜನಾಂಗ ರಾಜನಿಗೆ ಕಂಬನಿ ಮಿಡಿದಿದೆ. ಯೋನಾನೆನ್ ಬುಡಕಟ್ಟಿಗೆ ಸೇರಿದ ಈ ಜನಾಂಗ ಟನ್ನಾದ ವನಾಷು ದ್ವೀಪದಲ್ಲಿ ವಾಸಿಸುತ್ತಿದ್ದು, ರಾಜನ ಸಾವಿನ ಸುದ್ದಿ ಕೇಳಿ ನೊಂದುಕೊಂಡಿದೆ. ಈ ಜನರು ಫಿಲಿಪ್‌ರನ್ನು ದೇವರಂತೆ ಪೂಜಿಸುತ್ತಿದ್ದರು.
ʼಬೋನಿ ಎಂʼ ಹಾಡಿಗೆ ಹೆಜ್ಜೆ ಹಾಕಿದ ಮತ್ತಷ್ಟು ಮೆಡಿಕಲ್ ವಿದ್ಯಾರ್ಥಿಗಳು
ಈ ದ್ವೀಪಕ್ಕೆ ಎಂದೂ ಸಹ ಕಾಲಿಡದ ಫಿಲಿಪ್‌ಗೆ 400 ಮಂದಿ ಇರುವ ಈ ಬುಡಕಟ್ಟು ಜನಾಂಗದ ಬಗ್ಗೆ ಗೊತ್ತಿತ್ತು. ಫಿಲಿಪ್ ನಿಧನಕ್ಕೆ ಸಂತಾಪು ಸೂಚಿಸಲೆಂದು ತಮ್ಮ ಸಂಪ್ರದಾಯದ ಪ್ರಕಾರ ವಿಶೇಷ ನೃತ್ಯ ಹಾಗೂ ಶೋಕಾಚರಣೆಯನ್ನು ಹಮ್ಮಿಕೊಳ್ಳಲು ಈ ಮಂದಿ ನಿರ್ಧರಿಸಿದ್ದಾರೆ.
ಪೋರ್ಟ್ ವಿಲಾಗೆ 1960ರಲ್ಲಿ ಪತ್ನಿಯೊಂದಿಗೆ ಭೇಟಿ ಕೊಟ್ಟಿದ್ದ ಫಿಲಿಪ್, ಈ ಬುಡಕಟ್ಟು ಜನಾಂಗದೊಂದಿಗೆ ಚಿತ್ರವೊಂದನ್ನು ತೆಗೆಸಿಕೊಂಡಿದ್ದು, ಅಂದಿನಿಂದ ಈ ಬುಡಕಟ್ಟು ಮಂದಿ ಆತನನ್ನು ದೇವರ ಅವತಾರ ಎಂದು ಭಾವಿಸಿದ್ದರು ಎಂಬ ಮಾತು ಇದೆ.