ನವದೆಹಲಿ: ಸುಪ್ರೀಂಕೋರ್ಟ್ ನ ಶೇಕಡ 50ರಷ್ಟು ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಬೆಳಗ್ಗೆ 10.30 ಕ್ಕೆ ವಿಚಾರಣೆ ನಡೆಸಬೇಕಿದ್ದ ನ್ಯಾಯಪೀಠವು 11.30 ಕ್ಕೆ ನಡೆಸಲಿದೆ.
ಅದೇ ಬೆಳಗ್ಗೆ 11 ಗಂಟೆಗೆ ಅರ್ಜಿ ವಿಚಾರಣೆಗೆ ಕುಳಿತುಕೊಳ್ಳಬೇಕಿದ್ದ ನ್ಯಾಯಾಧೀಶರು 12 ಗಂಟೆಗೆ ವಿಚಾರಣೆ ನಡೆಸಲಿದ್ದಾರೆ ಎಂದು ಸುಪ್ರೀಂಕೋರ್ಟ್ ಹೆಚ್ಚುವರಿ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಸುಪ್ರೀಂಕೋರ್ಟ್ ನ ಶೇಕಡ 50 ರಷ್ಟು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು ನ್ಯಾಯಾಧೀಶರು ತಮ್ಮ ನಿವಾಸದಿಂದ ವರ್ಚುವಲ್ ಮೂಲಕ ವಿಚಾರಣೆ ನಡೆಸಲಿದ್ದಾರೆ. ಕೆಲವು ವಿಚಾರಣೆ ಸ್ಥಗಿತಗೊಳಿಸಲಾಗಿದೆ. ದೇಶದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆ ಕಂಡಿದೆ. ಸುಪ್ರೀಂಕೋರ್ಟ್ ನ ಶೇಕಡ 50 ರಷ್ಟು ಸಿಬ್ಬಂದಿಗೆ ಸೋಂಕು ತಗುಲಿರುವುದು ದೈನಂದಿನ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.