ದೇಶದಲ್ಲಿ ಕೊರೊನಾ ಎರಡನೇ ಅಲೆ ಶರವೇಗದಲ್ಲಿ ಏರಿಕೆಯಾಗತೊಡಗಿದ್ದು, ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲಿ ಸೋಂಕಿನ ಹರಡುವಿಕೆ ಪ್ರಮಾಣದಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಪ್ರತಿನಿತ್ಯ ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದು, ಅದರಲ್ಲೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.
ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಕೇರಳ ಮತ್ತು ಛತ್ತೀಸ್ ಗಡದಲ್ಲಿ ಶೇಕಡ 70.82 ರಷ್ಟು ಸಕ್ರಿಯ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರವೊಂದರಲ್ಲೇ ಈ ಪ್ರಮಾಣ ಶೇಕಡ 48.57 ಎಂದು ಹೇಳಲಾಗಿದೆ.
‘ಕೊರೊನಾ’ದಿಂದ ಗುಣಮುಖನಾಗಿದ್ದ ಯುವಕ ಹಠಾತ್ ಸಾವು
ಸೋಂಕು ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಈಗಾಗಲೇ ಲಾಕ್ಡೌನ್ ಜಾರಿಗೊಳಿಸಲು ಮುಂದಾಗಿದ್ದು, ಸೋಂಕು ಪ್ರಕರಣ ಹೆಚ್ಚಾಗಿರುವ ಕರ್ನಾಟಕದ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಒಂದೊಮ್ಮೆ ದೇಶದಾದ್ಯಂತ ಸೋಂಕಿನ ಪ್ರಕರಣಗಳು ಇದೇ ವೇಗದಲ್ಲಿ ಏರಿಕೆಯಾದರೆ ಮತ್ತೊಮ್ಮೆ ಲಾಕ್ಡೌನ್ ಜಾರಿಯಾಗುತ್ತದಾ ಎಂಬ ಭೀತಿಯೂ ಎದುರಾಗಿದೆ.