ಚೀನಾದ ವುಹಾನ್ ನಗರದಲ್ಲಿ ಆರಂಭವಾಯಿತು ಎಂದು ಹೇಳಲಾದ ಕೊರೊನಾ ಸೋಂಕು ಇಂದು ವಿಶ್ವದಾದ್ಯಂತ ಹರಡಿದೆ. ಹಲವು ರಾಷ್ಟ್ರಗಳಲ್ಲಿ ಈಗ ಎರಡನೇ ಹಾಗೂ ಮೂರನೇ ಅಲೆ ಆರಂಭವಾಗಿದ್ದು, ಇದರ ಮಧ್ಯೆ ಕೋವಿಡ್ ಲಸಿಕೆ ನೀಡಿಕೆಯೂ ನಡೆಯುತ್ತಿದೆ.
ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಲಸಿಕೆ ಕಂಡುಹಿಡಿದಿದ್ದು, ಉತ್ಪಾದನೆ ಜೊತೆಗೆ ಸಾರ್ವಜನಿಕರಿಗೆ ಲಸಿಕೆ ನೀಡಿಕೆಯೂ ಆರಂಭವಾಗಿದೆ. ಭಾರತದ ಲಸಿಕೆಗಳು ಪರಿಣಾಮಕಾರಿಯಾಗಿದ್ದು, ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತಿರುವುದರ ಜೊತೆಗೆ ಹರಡುವಿಕೆಯನ್ನೂ ನಡೆಯುತ್ತಿದೆ ಎನ್ನಲಾಗಿದೆ.
ಇದರ ಮಧ್ಯೆ ಚೀನಾದ ಕೊರೊನಾ ಲಸಿಕೆಯ ಕುರಿತು ಅಪಸ್ವರ ಕೇಳಿಬಂದಿದ್ದು, ಇದೀಗ ಚೀನಾ ಅಧಿಕಾರಿಗಳೇ ಸತ್ಯ ಒಪ್ಪಿಕೊಂಡಿದ್ದಾರೆ. ಚೀನಾದ ಲಸಿಕೆಗಳ ಸಾಮರ್ಥ್ಯ ಕಡಿಮೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇವುಗಳು ಅತಿಹೆಚ್ಚಿನ ರಕ್ಷಣಾತ್ಮಕ ಸಾಮರ್ಥ್ಯ ಹೊಂದಿಲ್ಲ ಎಂದಿದ್ದಾರೆ.