ನವದೆಹಲಿ: ಯುಪಿಐ ಆಧಾರಿತ ವ್ಯಾಲೆಟ್ ಗಳು, ಪ್ರೀಪೇಯ್ಡ್ ಕಾರ್ಡ್ ಗಳಿಗೆ ಅನ್ವಯವಾಗುವ ಹೊಸ ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿದೆ. ಡಿಜಿಟಲ್ ವ್ಯಾಲೆಟ್ ನಿಂದ ಮತ್ತೊಂದು ಡಿಜಿಟಲ್ ಹಣ ವರ್ಗಾವಣೆ ಮಾಡುವ ಅವಕಾಶ ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆ.
ಆರ್ಬಿಐ ಹೊಸ ನೀತಿಗಳನ್ನು ರೂಪಿಸಿದ್ದು, ಪೂರ್ಣ ಕೆವೈಸಿ ಕಡ್ಡಾಯಗೊಳಿಸಿದೆ. ಡಿಜಿಟಲ್ ವ್ಯವಹಾರಗಳು ಇನ್ನು ಮುಂದೆ ಸುಲಭವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನ ಹೊಸ ನೀತಿಯ ಅನ್ವಯ ವ್ಯಾಲೆಟ್ ನಲ್ಲಿ ಗರಿಷ್ಠ ಎರಡು ಲಕ್ಷ ರೂಪಾಯಿವರೆಗೆ ಹಣ ಇಡಬಹುದು. ಈ ಮೊದಲು ಒಂದು ಲಕ್ಷ ರೂಪಾಯಿವರೆಗೂ ಹಣ ಇಡುವ ಮಿತಿ ಇತ್ತು. ಈಗ ನಿಯಮ ಬದಲಿಸಿ ಡಿಜಿಟಲ್ ವ್ಯಾಲೆಟ್ ನಿಂದ ಇನ್ನೊಂದು ಡಿಜಿಟಲ್ ಬ್ಯಾಲೆಟ್ ಹಣ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. 2 ಲಕ್ಷ ರೂ.ವರೆಗೂ ಹಣ ಇಡಬಹುದಾಗಿದೆ.