ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರವಾಗಿ ಗಾಯಕಿ ಮಂಗ್ಲಿ ಪ್ರಚಾರ ನಡೆಸಲಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ತೆಲುಗು ರಿಮೇಕ್ ನಲ್ಲಿ ‘ಕಣ್ಣೇ ಅದಿರಿಂದಿ…’ ಹಾಡಿನ ಮೂಲಕ ಮಂಗ್ಲಿ ರಾಜ್ಯದಲ್ಲೂ ಜನಪ್ರಿಯರಾಗಿದ್ದಾರೆ. ರಾಯಚೂರು ಭಾಗದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಚಾರಕ್ಕೆ ಕಲಿಸಲಾಗುತ್ತಿದೆ. ನಾಳೆ ಮಸ್ಕಿ ಕ್ಷೇತ್ರದ ವಿವಿಧ ಕಡೆ ಮಂಗ್ಲಿ ಪ್ರಚಾರ ನಡೆಸಲಿದ್ದಾರೆ.