ಬೆಂಗಳೂರು: ಸಾರಿಗೆ ನೌಕರರು 6 ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳು ಮತ್ತು ಮಾಸಿಕ ಪಾಸ್ ಹೊಂದಿದವರು ಪ್ರಯಾಣಿಸಲು ತೊಂದರೆಯಾಗಿದೆ.
ಸಾರಿಗೆ ನಿಗಮದ ವಿದ್ಯಾರ್ಥಿ ಬಸ್ ಪಾಸ್ ಗಳು ಮತ್ತು ಮಾಸಿಕ ಬಸ್ ಪಾಸ್ ಗಳನ್ನು ಹೊಂದಿರುವ ಸಾರ್ವಜನಿಕರಿಗೆ ಮುಷ್ಕರದಿಂದಾಗಿ ಅನುಕೂಲವಾಗಿರುವುದಕ್ಕೆ ಕೆಎಸ್ಆರ್ಟಿಸಿ ವಿಷಾದ ವ್ಯಕ್ತಪಡಿಸಿದೆ. ಮುಷ್ಕರದ ಅವಧಿಯ ದಿನಗಳಿಗೆ ಸರಿಸಮಾನವಾಗಿ ಬಸ್ ಪಾಸ್ ಗಳ ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.