ಮೈಸೂರಿನ 73 ವರ್ಷದ ಹಿರಿಯ ಮಹಿಳೆಯೊಬ್ಬರಿಗೆ ಮ್ಯಾಟ್ರಿಮೋನಿ ಜಾಹೀರಾತಿನ ಮೂಲಕ 69 ವರ್ಷದ ಪುರುಷ ಸಂಗಾತಿ ಸಿಕ್ಕಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ತಮ್ಮ ವರಾನ್ವೇಷಣೆ ಕುರಿತಂತೆ ಜಾಹೀರಾತು ಹಾಕಿದ ಎರಡೇ ವಾರಗಳಲ್ಲಿ ಜೋಡಿ ಸಿಕ್ಕಿದ್ದಾರೆ. ಇಂಜಿನಿಯರ್ ಆಗಿರುವ ವರ, ಮಡದಿಯನ್ನು ಕಳೆದುಕೊಂಡು ಬಹಳ ಸಮಯ ಏಕಾಂಗಿಯಾಗಿದ್ದರು. ಈ ಜಾಹೀರಾತು ನೋಡಿದ ಬಳಿಕ ಅವರ ಸ್ನೇಹಿತರು ಮದುವೆಯಾಗಲು ಪ್ರೇರೇಪಣೆ ನೀಡಿದ್ದಾರೆ.
ತಮ್ಮನ ಎದುರಲ್ಲೇ ಅತ್ಯಾಚಾರ ಎಸಗಿ ಸಮೋಸ, 20 ರೂಪಾಯಿ ಕೊಟ್ಟ ಅಜ್ಜ, ಅಂಕಲ್
ತಮ್ಮದೇ ಬ್ರಾಹ್ಮಣ ಸಮುದಾಯಕ್ಕೆ ಸೇರಿದ, ಆರೋಗ್ಯವಂತ ಹಿರಿಯ ವರ ಬೇಕಾಗಿದ್ದು, ತಾವು ’ಜೀವನ ಸಂಗಾತಿ’ಯ ಹುಡುಕಾಟದಲ್ಲಿ ಇರುವುದಾಗಿ ಈ ಮಹಿಳೆ ಹೇಳಿಕೊಂಡಿದ್ದರು. ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿರಿಯ ಮಹಿಳೆಯ ಸಮಯೋಚಿತ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
“ನನಗೆ ನನ್ನದೇ ಕುಟುಂಬ ಇಲ್ಲ. ನನ್ನ ಪೋಷಕರು ಕಾಲವಾಗಿದ್ದಾರೆ. ನನ್ನ ಮೊದಲ ಮದುವೆ ವಿಚ್ಛೇದನದಲ್ಲಿ ಅಂತ್ಯಗೊಂಡಿದೆ. ಒಬ್ಬಳೇ ಇರುವುದಕ್ಕೆ ಭಯವಾಗುತ್ತದೆ. ಮನೆಯಲ್ಲಿ ಬಿದ್ದುಬಿಡುವೆ ಅಥವಾ ಮನೆಯಿಂದ ಬಸ್ ಸ್ಟಾಪ್ಗೆ ಹೋಗಲು ಕಷ್ಟವಾಗುತ್ತದೆ ಎಂಬ ಅಭದ್ರ ಆಲೋಚನೆಗಳು ಜೀವನ ಸಂಗಾತಿಯೊಬ್ಬರನ್ನು ಹುಡುಕುವಂತೆ ಮಾಡಿದೆ” ಎಂದು ಈ ಮಹಿಳೆ ಹೇಳಿಕೊಂಡಿದ್ದರು.