ನವದೆಹಲಿ: ಕಿರಿಯ ಇಂಜಿನಿಯರ್ ಹುದ್ದೆಗೆ ಉನ್ನತ ಪದವಿ ಅನರ್ಹತೆಯ ಮಾನದಂಡವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಜೂನಿಯರ್ ಎಂಜಿನಿಯರ್ ಹುದ್ದೆಗೆ ಉನ್ನತ ಪದವೀಧ ಅನರ್ಹತೆಯ ಮಾನದಂಡವಲ್ಲ. ಉನ್ನತ ಪದವೀಧರರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗೆಂದ ಮಾತ್ರಕ್ಕೆ ಪದವೀಧರರು ಉನ್ನತ ಪದವಿ ಪಡೆಯಬೇಕೆಂಬ ಕರಾರು ಇಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್ ಮತ್ತು ಎಸ್. ರವೀಂದ್ರ ಭಟ್ ಅವರ ನ್ಯಾಯಪೀಠ ಉನ್ನತ ಪದವಿಯು ಕಿರಿಯ ಇಂಜಿನಿಯರ್ ಹೇಗೆ ಅನರ್ಹತೆ ಎಂಬುದನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಬಿಇ ಮತ್ತು ಬಿಟೆಕ್ ಪದವೀಧರರು ಜೂನಿಯರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ನ್ಯಾಯಪೀಠ ಹೇಳಿದೆ.
ಹಿಮಾಚಲ ಪ್ರದೇಶದ ವಿದ್ಯುಚ್ಛಕ್ತಿ ಮಂಡಳಿ ಜೂನಿಯರ್ ಇಂಜಿನಿಯರ್ ಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿ ಪುನೀತ್ ಶರ್ಮಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಹಿಮಾಚಲ ಪ್ರದೇಶದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಜೂನಿಯರ್ ಎಂಜಿನಿಯರ್ ಹುದ್ದೆಗೆ ಉನ್ನತ ಪದವೀಧರರು ಅರ್ಜಿ ಸಲ್ಲಿಸಬಹುದು. ವಿದ್ಯುಚ್ಛಕ್ತಿ ಮಂಡಳಿ ನೇರ ನೇಮಕಾತಿ ಪ್ರಕ್ರಿಯೆಯನ್ನು ಪರಿಶೀಲಿಸಿದಾಗ ಇದರಲ್ಲಿ ಒಟ್ಟು ಹುದ್ದೆಗಳ ಪೈಕಿ ಶೇಕಡ 36 ರಷ್ಟು ಸಹಾಯಕ ಇಂಜಿನಿಯರ್ ಮಟ್ಟದ ಹುದ್ದೆಗಳು, ಶೇಕಡ 64 ರಷ್ಟು ಹುದ್ದೆಗಳು ಫೀಡರ್ ಮಟ್ಟದವುಗಳಾಗಿದ್ದು ಕೆಳಹಂತದ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಂಜಿನಿಯರ್ ಹುದ್ದೆಗಳಿಗೆ ಪದವೀಧರರನ್ನು ಉದ್ದೇಶಪೂರ್ವಕವಾಗಿ ಪರಿಗಣಿಸದಿರುವ ನಿಯಮ ತಯಾರಕರ ಮನಸ್ಥಿತಿಯನ್ನು ತೋರಿಸುವಂತೆ ಇದೆ ಎಂದು ನ್ಯಾಯಪೀಠ ಹೇಳಿದೆ. ಉನ್ನತ ಪದವಿ ಅನರ್ಹತೆಯ ಮಾನದಂಡವಲ್ಲ, ಅವರು ಕೂಡ ಅರ್ಜಿ ಸಲ್ಲಿಸಲು ಅರ್ಹರು ಎಂದು ಹೇಳಲಾಗಿದೆ.