ವಿದ್ಯಾರ್ಥಿಯೊಬ್ಬ ‘ಇಂದು ನನ್ನ ಕೊನೆಯ ದಿನವಾಗಿದೆ. ಇಂದು ನಾನು ಸಾಯುತ್ತೇನೆ. ನನ್ನ ಮೇಲೆ ತಂದೆ – ತಾಯಿ ಆಶೀರ್ವಾದ ಇರಲಿ’ ಎಂದು ಬೋರ್ಡ್ ಮೇಲೆ ಬರೆದು ಶಾಲಾ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯ ಎಂ.ಎಸ್.ಕೆ. ಮಿಲ್ ಪ್ರದೇಶದ ಮದೀನಾ ಕಾಲೋನಿಯ ಶಾಲಾ ವಿದ್ಯಾರ್ಥಿ 16 ವರ್ಷದ ಶೇಖ್ ಉಮರ್ ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಈತ ಶನಿವಾರ ಬೆಳಗ್ಗೆ 7.30 ರ ಸುಮಾರಿಗೆ ಶಾಲಾ ಹಿಂಬಾಗಿಲಿನಿಂದ ಕೊಠಡಿ ಪ್ರವೇಶಿಸಿ ಈ ಕೃತ್ಯವೆಸಗಿಕೊಂಡಿದ್ದಾನೆ.
ಮಾಡೆಲ್ ಖಾಸಗಿ ವಿಡಿಯೋ ತೋರಿಸಿ ಪದೇ ಪದೇ ಲೈಂಗಿಕ ದೌರ್ಜನ್ಯ
9.30 ರ ಸುಮಾರಿಗೆ ಶಾಲಾ ಸಿಬ್ಬಂದಿ ಬಾಗಿಲು ತೆರೆದ ವೇಳೆ ವಿಷಯ ಬೆಳಕಿಗೆ ಬಂದಿದ್ದು, ರಾಘವೇಂದ್ರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಚೆನ್ನಾಗಿ ಓದುವಂತೆ ಪೋಷಕರು ಬೈದ ಹಿನ್ನೆಲೆಯಲ್ಲಿ ಬಾಲಕ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಿದ್ದಾರೆ.