alex Certify 51 ದೇವಸ್ಥಾನಗಳ ಮೇಲಿನ ಸರ್ಕಾರದ ನಿಯಂತ್ರಣ ಹಿಂಪಡೆದ ಉತ್ತರಾಖಂಡ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

51 ದೇವಸ್ಥಾನಗಳ ಮೇಲಿನ ಸರ್ಕಾರದ ನಿಯಂತ್ರಣ ಹಿಂಪಡೆದ ಉತ್ತರಾಖಂಡ ಸರ್ಕಾರ

ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರಗಳ ಹಿಡಿತವನ್ನು ಹಿಂಪಡೆಯಬೇಕೆಂಬ ಬಹುದಿನಗಳ ಕೂಗಿಗೆ ಕೊನೆಗೂ ಒಂದು ಮಟ್ಟದ ಆಶಾದಾಯಕ ಪ್ರತಿಕ್ರಿಯೆ ಸಿಕ್ಕಿದೆ.

ಬದ್ರಿನಾಥ, ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿಗಳೂ ಸೇರಿದಂತೆ ಉತ್ತರಾಖಂಡದ 51 ತೀರ್ಥಕ್ಷೇತ್ರಗಳ ಮೇಲಿನ ರಾಜ್ಯ ಸರ್ಕಾರದ ಹಿಡಿತಕ್ಕೆ ಮುಖ್ಯಮಂತ್ರಿ ತೀರಥ್‌ ಸಿಂಗ್ ರಾವತ್‌ ಅಂತ್ಯ ಹಾಡಿದ್ದಾರೆ. ಈ ಮೂಲಕ ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್‌ ತೆಗೆದುಕೊಂಡಿದ್ದ ನಿರ್ಣಯವನ್ನು ತೀರಥ್‌ ಹಿಂಪಡೆದುಕೊಂಡಿದ್ದಾರೆ.

ಈ 51 ದೇವಸ್ಥಾನಗಳು ರಾಜ್ಯ ಸರ್ಕಾರದ ನೇರ ನಿಯಂತ್ರಣದಲ್ಲಿದ್ದವು. ಚಾರ್‌ ಧಾಮ್‌ ದೇವಸ್ಥಾನ ನಿರ್ವಹಣೆ ಮಸೂದೆಗೆ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅಂಕಿತ ಕೊಟ್ಟ ಬಳಿಕ ಈ ಬೆಳವಣಿಗೆ ಆಗಿತ್ತು.

ಕಾನೂನು ಅಸ್ತ್ರಕ್ಕೆ ಜಗ್ಗದ ಸಾರಿಗೆ ನೌಕರರು: 4 ನೇ ದಿನಕ್ಕೆ ಮುಷ್ಕರ –ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್

ಈ ನಡೆಯ ಕುರಿತಂತೆ ಕೆಂಡಾಮಂಡಲರಾಗಿದ್ದ ಈ ದೇವಸ್ಥಾನಗಳ ಅರ್ಚಕರು, ತಮ್ಮ ಪೂರ್ವಜರ ಕಾಲದಿಂದ ಈ ದೇವಸ್ಥಾನಗಳ ವ್ಯವಹಾರಗಳನ್ನು ನೋಡಿಕೊಂಡು ಬರುತ್ತಿರುವ ತಮಗೆ ಈ ಕಾನೂನಿನಿಂದ ಅನ್ಯಾಯವಾಗಿದೆ ಎಂದು ದೂರಿದ್ದರು.

ತೀರಥ್‌ರ ನಿರ್ಧಾರ ಸ್ವಾಗತಿಸಿರುವ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, “ಉತ್ತರಾಖಂಡ ಸರ್ಕಾರದ ನಿಯಂತ್ರಣದಿಂದ ಈ 51 ದೇವಸ್ಥಾನಗಳನ್ನು ಹೊರತರಬೇಕೆಂದು ಕೋರಿ ನಾನು ಸಲ್ಲಿಸಿದ್ದ ಅರ್ಜಿಯ ಮೇಲೆ ವಕಾಲತ್ತು ಮಾಡುವ ಮುನ್ನವೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ಸರ್ಕಾರ ಎಂದರೆ ಇದು” ಎಂದಿದ್ದಾರೆ.

ಇದೇ ರೀತಿ ದೇವಸ್ಥಾನಗಳ ಮೇಲಿನ ಸರ್ಕಾರದ ನಿಯಂತ್ರಣಕ್ಕೆ ತಿಲಾಂಜಲಿ ಹಾಡುವುದಾಗಿ ಹೇಳಿರುವ ಬಿಜೆಪಿ, ತಮಿಳುನಾಡಿನ ವಿಧಾನ ಸಭಾ ಚುನಾವಣಾ ಪ್ರಚಾರದ ವೇಳೆ ಮತದಾರರನ್ನು ಸೆಳೆಯಲು ಯತ್ನಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...