ಬೆಂಗಳೂರು: ಮಹಾಮಾರಿಯಾಗಿ ವಿಶ್ವಾದ್ಯಂತ ಮತ್ತೆ ಅಟ್ಟಹಾಸ ಮೆರೆಯುತ್ತಾ ಜನಸಾಮಾನ್ಯರಲ್ಲಿ ಆತಂಕವನ್ನುಂಟು ಮಾಡುತ್ತಿರುವ ಕೊರೊನಾ ಎಂಬ ವೈರಸ್ ನಿಜವಾಗಿಯೂ ಇದೆಯೇ? ಎಂಬ ಕುತೂಹಲಕಾರಿ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇಂತಹ ಕುತೂಹಲಕ್ಕೆ ಉತ್ತರವಾಗಿ ಡಾ.ರಾಜು ಕೃಷ್ಣಮೂರ್ತಿ ಹೊಸದೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಇಟಲಿಯಲ್ಲಿ ಕೋವಿಡ್ ರೋಗಿಯೊಬ್ಬ ಸಾವಿನ್ನಪ್ಪಿದ ಬಳಿಕ ಆತನ ಮರಣೋತ್ತರ ಪರೀಕ್ಷೆಯಲ್ಲಿ ಆತನಿಗೆ ಕೊರೊನಾ ಇರಲಿಲ್ಲ ಎನ್ನಲಾಗಿತ್ತು. ಆನಂತರ ಕೊರೊನಾ ಎಂಬ ವೈರಸ್ ಇಲ್ಲವೇ ಇಲ್ಲ ಇದೊಂದು ದೊಡ್ಡ ಹಗರಣ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ವಿವರಣೆ ನೀಡಿರುವ ಡಾ.ರಾಜು, ವೈರಸ್ ಎಂಬುದು ಇದೆ 3 ಲಕ್ಷಕ್ಕೂ ಅಧಿಕ ವೈರಸ್ ಗಳಿವೆ ಅಂತೆಯೇ ಕೋವಿಡ್ ಕೂಡ ಒಂದು ವೈರಸ್. ಇದು 50 ವರ್ಷಗಳಿಂದ ಇರುವುದಾಗಿ ತಿಳಿಸಿದ್ದಾರೆ.
ಇದೊಂದು ಶ್ವಾಸಕೋಶದ ಮೇಲ್ಭಾಗ ಹಾಗೂ ಕೆಳಭಾಗ ಎರಡರಲ್ಲೂ ಇನ್ಫೆಕ್ಷನ್ ಆಗುವಂತ ಆದರೆ ಗುಣಪಡಿಸಬಹುದಾದ ಸೋಂಕು. ಪ್ರಮುಖವಾಗಿ ವೈರಲ್ ಇನ್ಫೆಕ್ಷನ್ ಮೂಲಕವೇ ಬರಬಹುದಾದಂತಹ ಕಾಯಿಲೆಯಾಗಿದೆ. ಕೊರೊನಾ ವೈರಸ್ ನಿಂದಾಗಿ ವ್ಯಕ್ತಿಯಲ್ಲಿ ಹಸಿವು ಕಡಿಮೆಯಾಗಿ ದೇಹದ ಶಕ್ತಿ ಕುಂದುತ್ತದೆ. ಹೀಗೆ ನಿಶ್ಯಕ್ತಿಯಾದಂತೆ ವೈರಸ್ ದೇಹದಲ್ಲಿ ವೇಗವಾಗಿ ಹರಡಲು ಆರಂಭವಾಗುತ್ತದೆ ಎಂದಿದ್ದಾರೆ.
ಕೊರೊನಾ ಹೊತ್ತಲ್ಲಿ ಸೆಕ್ಸ್ ಅಪಾಯಕಾರಿ, ಸುರಕ್ಷಿತ ಲೈಂಗಿಕತೆಗೆ ಇಲ್ಲಿದೆ ಸುಲಭ ದಾರಿ
ಕೊರೊನಾ ಮೊದಲ ಅಲೆಯಲ್ಲಿನ ವೈರಸ್ ಗೂ ಎರಡನೇ ಅಲೆಯಲ್ಲಿ ಆರಂಭವಾಗಿರುವ ವೈರಸ್ ಗೂ ವ್ಯತ್ಯಾಸವಿದೆ. ಎರಡನೇ ಅಲೆಯಲ್ಲಿ ಹರಡುತ್ತಿರುವ ವೈರಸ್ ರೂಪಾಂತರ ವೈರಸ್. ಹಾಗಾಗಿ ಈಗಾಗಲೇ ಸಿದ್ಧಪಡಿಸಲಾಗಿರುವ ಕೊರೊನಾ ಲಸಿಕೆ, ವ್ಯಾಕ್ಸಿನ್ ಗಳು ರೂಪಾಂತರ ವೈರಸ್ ಮೇಲೆ ಪರಿಣಾಮ ಬೀರಲಾರದು ಎಂಬುದು ಡಾ.ರಾಜು ಅಭಿಪ್ರಾಯ. ಕೊರೊನಾ ವೈರಸ್ ಕುರಿತ ಡಾ.ರಾಜು ಅವರ ಹೊಸ ವಿಡಿಯೋವನ್ನು ನೀವು ನೋಡಿ ಅಭಿಪ್ರಾಯ ತಿಳಿಸಿ.
https://www.facebook.com/watch/?v=449950199439356