ನೈಜೀರಿಯಾದ ತುಂಬು ಗರ್ಭಿಣಿಯೊಬ್ಬರು ರಾಷ್ಟ್ರೀಯ ಕ್ರೀಡಾ ಹಬ್ಬದಲ್ಲಿ ಟೇಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. 26 ವರ್ಷದ ಅಮೀನತ್ ಇಡ್ರೀಸ್ ಎಂಬವರು 8 ತಿಂಗಳ ಗರ್ಭಿಣಿಯಾಗಿದ್ದು ಚಿನ್ನದ ಪದಕವನ್ನ ಸಂಪಾದಿಸಿದ್ದಾರೆ.
ಗರ್ಭಿಣಿ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪೂಮ್ಸೇ ಎಂದು ಕರೆಯಲ್ಪಡುವ ಟೇಕ್ವಾಂಡೋದ ಯುದ್ಧೇತರ ಸಿಮ್ಯುಲೇಟೆಡ್ ವಿಭಾಗದಲ್ಲಿ ಅವರು ಇತರ ಪದಕಗಳನ್ನು ಸಹ ಪಡೆದರು.
ಈ ಪ್ರಶಸ್ತಿ ಸಿಕ್ಕಿರೋದು ನನಗೆ ತುಂಬಾನೇ ಸಂತಸ ತಂದಿದೆ. ತರಬೇತಿ ಪಡೆದ ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸೋಕೆ ನಿರ್ಧರಿಸಿದೆ. ಗರ್ಭಿಣಿಯಾಗೋದಕ್ಕೂ ಮುನ್ನ ನಾನು ತರಬೇತಿ ಅವಧಿಯನ್ನ ತುಂಬಾನೇ ಎಂಜಾಯ್ ಮಾಡ್ತಿದ್ದೆ. ಹಾಗಾಗಿ ನನಗೆ ಗರ್ಭಿಣಿಯಾಗಿದ್ದರಿಂದ ಯಾವುದೂ ಬದಲಾವಣೆ ಎನಿಸಲಿಲ್ಲ ಎಂದು ಅಮೀನತ್ ಹೇಳಿದ್ರು.
ಗರ್ಭಿಣಿಯ ಈ ಸಾಧನೆಯನ್ನ ಕೆಲವರು ಕೊಂಡಾಡಿದ್ರೆ ಇನ್ನೂ ಕೆಲವರು ಗರ್ಭಾವಸ್ಥೆಯಲ್ಲಿ ಈ ಸಾಹಸ ಬೇಕಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.