ಕದ್ದ ಮೊಬೈಲನ್ನು ಹಿಂದಿರುಗಿಸಿದ ಕಳ್ಳ…! ಇದರ ಹಿಂದಿದೆ ವಿಚಿತ್ರ ಕಾರಣ 09-04-2021 1:11PM IST / No Comments / Posted In: Latest News, India ದೇಶದ ಮೆಟ್ರೋ ಸಿಟಿಗಳಲ್ಲಿ ಮೊಬೈಲ್ಗಳನ್ನ ಕದಿಯೋದು ಸಾಮಾನ್ಯವಾಗಿಬಿಟ್ಟಿದೆ. ಸಾರ್ವಜನಿಕ ವಾಹನವಾಗಲಿ ಇಲ್ಲವೇ ನೀವು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗ್ತಾ ಇರಲಿ. ಮೊಬೈಲ್ ಸೇರಿದಂತೆ ನಿಮ್ಮ ಅಮೂಲ್ಯ ವಸ್ತುಗಳ ಮೇಲೆ ಎಷ್ಟು ಕಾಳಜಿಯನ್ನ ಹೊಂದಿದ್ದರೂ ಅದು ಕಡಿಮೆಯೇ. ನೋಯ್ಡಾದಲ್ಲಿ ಇಂತಹದ್ದೇ ಒಂದು ವಿಚಿತ್ರ ಕಳ್ಳತನದ ಪ್ರಸಂಗ ನಡೆದಿದೆ. ಹಿರಿಯ ವರದಿಗಾರರಾದ ದೆಬಾಯನ್ ರಾಯ್ ಎಂನವರು ಸೆಕ್ಟರ್ 52 ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಕಪ್ಪು ಬಣ್ಣದ ಮಾಸ್ಕ್ ಹಾಕಿಕೊಂಡು ಬಂದ ವ್ಯಕ್ತಿ ಅವರ ಕೈಲಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 10 ಪ್ಲಸ್ನ್ನು ಕದ್ದು ಪರಾರಿಯಾಗಿದ್ದಾನೆ. ಆದರೆ ದೆಬಾಯನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸುವ ಮುನ್ನವೇ ಕಳ್ಳ ತಾನು ಕದ್ದ ಫೋನ್ನ್ನು ಹಿಂದಿರುಗಿಸಿದ್ದಾನೆ..! ಅರೆ..! ಕಳ್ಳನಿಗೇಕೆ ಈ ಬುದ್ಧಿ ಬಂತು ಎಂದು ಭಾವಿಸಿದ್ರಾ..? ಆ ಕಳ್ಳ ಇದನ್ನ ಒನ್ಪ್ಲಸ್ 9 ಪ್ರೋ ಎಂದು ಭಾವಿಸಿ ಎಗರಿಸಿದ್ದನಂತೆ. ಆದರೆ ಇದು ಬೇರೆ ಫೋನ್ ಎಂದು ತಿಳಿದ ಬಳಿಕ ಸುರಕ್ಷಿತವಾಗಿ ವಾಪಸ್ ಮಾಡಿದ್ದಾನೆ. ಅಣ್ಣ ನಾನು ಇದನ್ನ ಒನ್ ಪ್ಲಸ್ 9 ಪ್ರೋ ಎಂದು ಭಾವಿಸಿದ್ದೆ ಎಂದು ಹೇಳಿ ಕಳ್ಳ ಈ ಮೊಬೈಲ್ನ್ನು ವಾಪಸ್ ಮಾಡಿದ್ದಾನಂತೆ. ಈ ಬಗ್ಗೆ ರಾಯ್ ಟ್ವಿಟರ್ನಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.