ಕಳೆದ ವರ್ಷ ಲಾಕ್ಡೌನ್ನಿಂದಾಗಿ ರದ್ದಾಗಿದ್ದ ಟಿಕೆಟ್ಗಳ ದರವನ್ನ ಪ್ರಯಾಣಿಕರಿಗೆ ಇನ್ನೂ ಹಿಂದಿರುಗಿಸದ ವಿಮಾನಯಾನ ಸಂಸ್ಥೆಗಳ ವಿರುದ್ಧ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಯಾಣಿಕರಿಗೆ ರದ್ದಾದ ಟಿಕೆಟ್ ದರ ವಾಪಸ್ಸಾತಿ ಸಂಬಂಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಬುಧವಾರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಭೆಯನ್ನ ನಡೆಸಿದ್ರು.
ಹಾಗೂ ಇಲ್ಲಿಯವರೆಗೆ ಟಿಕೆಟ್ ಹಣ ಹಿಂದಿರುಗಿಸದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಗೋ ಏರ್ ಹಾಗೂ ಇಂಡಿಗೋ ವಿಮಾನಯಾನ ಸಂಸ್ಥೆ ಗ್ರಾಹಕರಿಗೆ ಟಿಕೆಟ್ದರವನ್ನ ಸಂಪೂರ್ಣವಾಗಿ ಹಿಂದಿರುಗಿಸಿದ ಬಗ್ಗೆ ಸಭೆಯಲ್ಲಿ ದಾಖಲೆಯನ್ನ ಒದಗಿಸಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ಮಾರ್ಚ್ 31ರೊಳಗಾಗಿ ಲಾಕ್ಡೌನ್ ಸಮಯದಲ್ಲಿ ರದ್ದಾದ ಎಲ್ಲಾ ವಿಮಾನ ಟಿಕೆಟ್ಗಳ ಹಣವನ್ನ ಪ್ರಯಾಣಿಕರಿಗೆ ಹಿಂದಿರುಗಿಸಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಡೆಡ್ಲೈನ್ ನೀಡಿತ್ತು.
ಭಾರತದ ಕಡಿಮೆ ದರದ ವಿಮಾನಯಾನ ಸಂಸ್ಥೆ ಸ್ಪೈಸ್ಜೆಟ್ ತನ್ನೆಲ್ಲ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡುವಲ್ಲಿ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ನಾವು ಟಿಕೆಟ್ ಹಣ ಹಿಂದಿರುಗಿಸುವ ಕಾರ್ಯವನ್ನ ಮಾಡುತ್ತಿದ್ದೇವೆ, ಕ್ರೆಡಿಟ್ ಶೆಲ್ ಹಣವನ್ನ ಹಿಂದಿರುಗಿಸುವ ಸಲುವಾಗಿಯೇ ಮಾರ್ಚ್ ತಿಂಗಳಲ್ಲಿ ಸ್ಪೈಸ್ಜೆಟ್ ಗ್ರಾಹಕರ ಮಾಹಿತಿಯನ್ನ ಕೇಳಿ ಪತ್ರವನ್ನ ಬರೆದಿದೆ ಎಂದು ಸ್ಪೈಸ್ ಜೆಟ್ ವಕ್ತಾರ ಹೇಳಿದ್ದಾರೆ.
ನ್ಯಾಷನಲ್ ಕ್ಯಾರಿಯರ್ ಏರ್ ಇಂಡಿಯಾ ಟಿಕೆಟ್ ದರ ಮರುಪಾವತಿಯನ್ನ ಬಾಕಿ ಉಳಿಸಿಕೊಂಡಿದೆ. ಮೂಲಗಳ ಮಾಹಿತಿ ಪ್ರಕಾರ ಏರ್ ಇಂಡಿಯಾ ಇನ್ನೂ ಸರಿ ಸುಮಾರು 5 ಲಕ್ಷ 25 ಸಾವಿರ ಗ್ರಾಹಕರಿಗೆ ಒಟ್ಟು 2000 ಕೋಟಿ ಹಣವನ್ನ ಹಿಂದಿರುಗಿಸಬೇಕಿದೆ.
ಪ್ರಯಾಣಿಕರ ಬಾಕಿ ಮೊತ್ತವನ್ನ ಪಾವತಿಸುವ ವಿಚಾರದಲ್ಲಿ ಏರ್ ಇಂಡಿಯಾ ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧವಾಗಿದೆ. ಈಗಾಗಲೇ ಈ ಸಂಬಂಧ ಸೂಕ್ತ ಪ್ರಕ್ರಿಯೆಯನ್ನೂ ಆರಂಭಿಸಿದ್ದೇವೆ. ಏಪ್ರಿಲ್ 1ರ ಒಳಗಾಗಿ ಏರ್ ಇಂಡಿಯಾ 1 ಸಾವಿರ ಕೋಟಿ ಹಣವನ್ನ ಮರುಪಾವತಿ ಮಾಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ನಾವು ಹಣ ಮರುಪಾವತಿ ಮಾಡಬೇಕಾದ ಗ್ರಾಹಕರನ್ನ ವಿಚಾರಿಸುತ್ತಿದ್ದೇವೆ ಎಂದು ಏರ್ ಇಂಡಿಯಾ ವಕ್ತಾರ ಮಾಹಿತಿ ನೀಡಿದ್ರು.