alex Certify ಕೊರೊನಾ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ಜಗತ್ತಿಗೆ ಗಂಡಾಂತರ ತರಲಿದೆ ಚೀನಾದ ಹೊಸ ವೈರಸ್; ಭಯಾನಕ ವೈರಸ್ ಬಗ್ಗೆ ತಜ್ಞರಿಂದ ಬೆಚ್ಚಿಬೀಳಿಸುವ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ಜಗತ್ತಿಗೆ ಗಂಡಾಂತರ ತರಲಿದೆ ಚೀನಾದ ಹೊಸ ವೈರಸ್; ಭಯಾನಕ ವೈರಸ್ ಬಗ್ಗೆ ತಜ್ಞರಿಂದ ಬೆಚ್ಚಿಬೀಳಿಸುವ ಮಾಹಿತಿ

ನವದೆಹಲಿ: ವಿಶ್ವದಾದ್ಯಂತ ಕೊರೊನಾ ಸೋಂಕಿನಿಂದ ಜನ ತತ್ತರಿಸಿಹೋಗಿದ್ದಾರೆ. ದೇಶದಲ್ಲಿ ಕೊರೊನಾ ಎರಡನೆಯ ಅಲೆ ಭಾರಿ ಆತಂಕವನ್ನುಂಟು ಮಾಡಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ.

ವಿಶ್ವದಾದ್ಯಂತ ಹಾನಿ ಮಾಡುವ ಮತ್ತೊಂದು ಭಯಾನಕ ವೈರಸ್ ಸುದ್ದಿ ಹೊರಬಂದಿದೆ. ಕೊರೊನಾ ವೈರಸ್ ನಂತೆಯೇ ಮತ್ತೊಂದು ವೈರಸ್ ವಿಶ್ವಕ್ಕೆ ತೊಂದರೆ ನೀಡಲಿದೆ ಎಂದು ಹೇಳಲಾಗಿದೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಇನ್ನೂ ಅನೇಕ ರೀತಿಯ ಹೊಸ ಮತ್ತು ಹೆಚ್ಚು ಅಪಾಯಕಾರಿಯಾದ ಕೊರೊನಾ ವೈರಸ್ ಗಳು ಅಸ್ತಿತ್ವದಲ್ಲಿದೆ ಎಂದು ಸಂಶೋಧಕರ ತಂಡ ಹೇಳಿದೆ.

ಚೀನಾದ ವುಹಾನ್ ಮತ್ತು ಇತರೆ ನಗರಗಳಲ್ಲಿನ ಕೃಷಿ ಪ್ರಯೋಗಾಲಯಗಳಲ್ಲಿ ಅಕ್ಕಿ ಮತ್ತು ಹತ್ತಿಯ ಆನುವಂಶಿಕ ಮಾಹಿತಿಯ ಆಧಾರದ ಮೇಲೆ ವಿಜ್ಞಾನಿಗಳು ಈ ಮಾಹಿತಿ ನೀಡಿದ್ದಾರೆ. ಒಂದು ಕಡೆ ಕೊರೊನಾದಿಂದ ವಿಶ್ವವೇ ತತ್ತರಿಸಿಹೋಗಿದೆ. ಈ ಸಂದರ್ಭದಲ್ಲಿ ವಿಜ್ಞಾನಿಗಳು ಹೇಳಿರುವ ಮಾಹಿತಿ ನಿಜವಾದರೆ ಚೀನಾದಿಂದ ಜಗತ್ತಿಗೆ ಮತ್ತೊಂದು ಭಾರಿ ಗಂಡಾಂತರ ಎದುರಾಗಲಿದೆ.

ಕೃಷಿ ಪ್ರಯೋಗಾಲಯಗಳಲ್ಲಿ ವೈದ್ಯಕೀಯ ಸಂಶೋಧನಾ ಕೇಂದ್ರಗಳು ಅಥವಾ ವೈರಾಲಜಿ ಲ್ಯಾಬ್ ಗಳಂತಹ ವ್ಯವಸ್ಥೆಗಳು ಇಲ್ಲದ ಕಾರಣ ಈ ವೈರಸ್ ಗಳು ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದಾಗಿದೆ. ಆರ್ಕ್ಸಿವ್ ಹೆಸರಿನ ಪ್ರಿಂಟ್ ಸರ್ವರ್ ನಲ್ಲಿ ಈ ಮಾಹಿತಿಯನ್ನು ಪ್ರಕಟಿಸಲಾಗಿದೆ. ಪ್ರಯೋಗಾಲಯಗಳಲ್ಲಿ ಮಾನವರಿಗೆ ಹಾನಿ ಮಾಡುವ ಅನೇಕ ಅಪಾಯಕಾರಿ ವೈರಸ್ ಗಳು ಇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇವುಗಳನ್ನು ಸುರಕ್ಷಿತವಾಗಿ ನಿಯಂತ್ರಿಸದಿದ್ದರೆ ಜಗತ್ತಿಗೆ ತೊಂದರೆಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಆರ್ಕ್ಸಿವ್ ನಲ್ಲಿ ಪ್ರಕಟವಾದ ಈ ವರದಿಯನ್ನು ಯಾವುದೇ ಶೈಕ್ಷಣಿಕ ಜರ್ನಲ್ ಅಥವಾ ತಜ್ಞರು ಗುರುತಿಸುತ್ತಿಲ್ಲ. ಖಂಡಿತವಾಗಿಯೂ ಸಂಶೋಧಕರ ಮಾಹಿತಿ ಆಘಾತಕಾರಿಯಾಗಿದೆ. ಕೃಷಿ ಪ್ರಯೋಗಾಲಯಗಳಲ್ಲಿನ ಅಕ್ಕಿ ಮತ್ತು ಹತ್ತಿಯ ಆನುವಂಶಿಕ ಅನುಕ್ರಮದ 2017 ರಿಂದ 2020 ರ ವರೆಗಿನ ಡೇಟಾವನ್ನು ವಿಜ್ಞಾನಿಗಳು ಸಂಗ್ರಹಿಸಿದ್ದಾರೆ. ಈ ಡೇಟಾ ವೈರಸ್ ಗಳಿಂದ ಕೂಡಿದ್ದು ಅದು ಮೆರ್ಸ್ ಮತ್ತು ಸಾರ್ಸ್ ಗೆ ಸೇರಿದೆ.

ಆಶ್ಚರ್ಯಕರ ಸಂಗತಿಯೆಂದರೆ ಎಲ್ಲಾ ಆನುವಂಶಿಕ ದತ್ತಾಂಶಗಳನ್ನು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪಡೆಯಲಾಗಿದೆ. ಕೊರೋನಾ ವೈರಸ್ ಕೋವಿಡ್ -19 ಸಾಂಕ್ರಾಮಿಕ ರೋಗ ಇದೇ ಲ್ಯಾಬ್ ನಿಂದ ಹರಡಿದೆ ಎಂದು ಜಗತ್ತು ಇನ್ನೂ ಅನುಮಾನಿಸುತ್ತಿದೆ. ಚೀನಾ ಸರ್ಕಾರ ಇದನ್ನು ನಿರಂತರವಾಗಿ ನಿರಾಕರಿಸುತ್ತಿದೆ. ವಿಶ್ವದಾದ್ಯಂತ ವಿಜ್ಞಾನಿಗಳು ಇದೇ ಪ್ರಯೋಗಾಲಯದ ಮೇಲೆ ಅನುಮಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...