
ನಟಿ ನಿತ್ಯಾ ಮೆನನ್ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿತ್ಯಾ ಮೆನನ್ 2005ರಂದು ಕನ್ನಡದ ‘7’ಓ ಕ್ಲಾಕ್’ ಎಂಬ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.
ನಟಿ ನಿತ್ಯಾ ಮೆನನ್ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುವ ಪ್ರತಿಭಾವಂತ ನಟಿಯಾಗಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್
ನಿತ್ಯಾ ಮೆನನ್ ನಟನೆ ಜೊತೆಗೆ ಹಿನ್ನೆಲೆ ಗಾಯಕಿಯಾಗಿಯೂ ಹೆಸರು ಮಾಡಿದ್ದಾರೆ. ನಿತ್ಯಾ ಮೆನನ್ 1988 ಏಪ್ರಿಲ್ 8ರಂದು ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಹಾಗೂ ಸಿನಿಮಾ ಕಲಾವಿದರು ನಿತ್ಯಾ ಮೆನನ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.