ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿರುವುದು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ. ಸೋಂಕಿನ ಭಯದಿಂದಾಗಿ ಮಕ್ಕಳಿಗೆ ಆನ್ಲೈನ್ ನಲ್ಲಿಯೇ ತರಗತಿ ನಡೆಯುತ್ತಿದೆ. ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಲ್ಯಾಪ್ ಟಾಪ್ ಅಗತ್ಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಎಚ್.ಪಿ. ಕಂಪನಿ, ಮಾರುಕಟ್ಟೆಗೆ ಅಗ್ಗದ ಲ್ಯಾಪ್ ಟಾಪ್ ತಂದಿದೆ. ಇದು ಚಿಕ್ಕಮಕ್ಕಳಿಗೆ ಉತ್ತಮ ಆಯ್ಕೆಯಾಗಿದೆ.
ಎಚ್‌ಪಿ ಇತ್ತೀಚೆಗೆ ಹೊಸ ಎಚ್‌ಪಿ ಕ್ರೋಮ್‌ಬುಕ್ 11 ಎ ಬಿಡುಗಡೆ ಮಾಡಿದೆ. ಎರಡರಿಂದ ಏಳನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಈ ಹೊಸ ಲ್ಯಾಪ್‌ಟಾಪ್ ಯೋಗ್ಯವಾದದ್ದು ಎಂದು ಕಂಪನಿ ಹೇಳಿಕೊಂಡಿದೆ. ಈ ಲ್ಯಾಪ್‌ಟಾಪ್ ಮಕ್ಕಳ ಆನ್‌ಲೈನ್ ತರಗತಿಗೆ ಸೂಕ್ತವಾದ ಗ್ಯಾಜೆಟ್ ಆಗಿದೆ. ಶಾಲಾ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ ಲ್ಯಾಪ್ ಟಾಪ್ ವಿನ್ಯಾಸಗೊಳಿಸಲಾಗಿದೆ. ಹೊಸ ಲ್ಯಾಪ್‌ಟಾಪ್‌ನಲ್ಲಿ ಮೀಡಿಯಾ ಟೆಕ್ ಎಂಟಿ 8183 ಆಕ್ಟಾ-ಕೋರ್ ಪ್ರೊಸೆಸರ್ ಇದೆ. ಈ ಲ್ಯಾಪ್‌ಟಾಪ್ 11.6 ಇಂಚಿನ ಪರದೆಯನ್ನು ಹೊಂದಿದೆ. ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಅಸಿಸ್ಟೆಂಟ್ ನೀಡಲಾಗಿದೆ.
ಈ ಹೊಸ ಎಚ್‌ಪಿ ಕ್ರೋಮ್‌ಬುಕ್ 11 ಎ ಲ್ಯಾಪ್‌ಟಾಪ್ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಹೊಂದಿದೆ. ಇದನ್ನು 256 ಜಿಬಿ ವರೆಗೆ ವಿಸ್ತರಿಸಬಹುದು. ಇದರೊಂದಿಗೆ ಗೂಗಲ್ ಒನ್‌ನಿಂದ ಹೆಚ್ಚುವರಿ 100 ಜಿಬಿ ಕ್ಲೌಡ್ ಸ್ಟೋರೇಜ್ ಸಹ ಲಭ್ಯವಿದೆ. ಹೊಸ ಲ್ಯಾಪ್ ಟಾಪ್ ಬೆಲೆ 21,999 ರೂಪಾಯಿ. ಇದನ್ನು ಇ-ಕಾಮರ್ಸ್ ಸೈಟ್ ನಲ್ಲಿ ಖರೀದಿಸಬಹುದಾಗಿದೆ.