ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುವವರಿಗೊಂದು ಖುಷಿ ಸುದ್ದಿ ಇದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಭ್ಯರ್ಥಿಗಳ ನೇಮಕಕ್ಕೆ ಮುಂದಾಗಿದೆ. ಪಿ ಎನ್ ಬಿ ಬ್ಯಾಂಕ್ ಸ್ವೀಪರ್ ಗಳ ನೇಮಕಕ್ಕೆ ಮುಂದಾಗಿದೆ. ಅನಕ್ಷರಸ್ಥ ಅಭ್ಯರ್ಥಿ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಗುರುಗ್ರಾಮ್ ಮತ್ತು ತಿರುವನಂತಪುರಂ ವಲಯದಲ್ಲಿ 58 ಅಭ್ಯರ್ಥಿಗಳ ನೇಮಕಕ್ಕೆ ಪಿಎನ್‌ಬಿ ಅರ್ಜಿ ಕೋರಿದೆ. ಗುರುಗ್ರಾಮ್ ವೃತ್ತಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 15. ತಿರುವನಂತಪುರಂಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 17 ಎಂದು ಬ್ಯಾಂಕ್ ಹೇಳಿದೆ.
ಅಭ್ಯರ್ಥಿಯ ಗರಿಷ್ಠ ವಿದ್ಯಾರ್ಹತೆ 10ನೇ ತರಗತಿ ಪಾಸ್ ಆಗಿರಬಾರದು. ಅವಿದ್ಯಾವಂತ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 18 ವರ್ಷ ಮೇಲ್ಪಟ್ಟ ಹಾಗೂ 24 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಬೇಕು. ಅರ್ಜಿ ಭರ್ತಿ ಮಾಡಿ, ಸೂಕ್ತ ದಾಖಲೆಯೊಂದಿಗೆ ಹತ್ತಿರದ ಬ್ಯಾಂಕ್ ಶಾಖೆಗೆ ನೀಡಬೇಕು.