alex Certify ಕೊರೊನಾ 2 ನೇ ಅಲೆ ಹೆಚ್ಚಳವಾಗುತ್ತಿರುವುದರ ಹಿಂದಿನ ಕಾರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಡಾ. ರಾಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ 2 ನೇ ಅಲೆ ಹೆಚ್ಚಳವಾಗುತ್ತಿರುವುದರ ಹಿಂದಿನ ಕಾರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಡಾ. ರಾಜು

ಬೆಂಗಳೂರು: ದೇಶಾದ್ಯಂತ ಮತ್ತೆ ಕೊರೊನಾ ಮಹಾಮಾರಿ ಅಟ್ಟಹಾಸ ಆರಂಭವಾಗಿದೆ. ಒಂದೆಡೆ ಕೊರೊನಾ ಲಸಿಕೆ ನೀಡಲಾಗುತಿದ್ದರೂ ಕೂಡ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಾಮಾನ್ಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ವ್ಯಾಕ್ಸಿನ್ ಪಡೆದರೂ ಕೊರೊನಾ ಸೋಂಕು ಹೆಚ್ಚಲು ಕಾರಣವೇನು…? ಕೊರೊನಾ ಎರಡನೇ ಅಲೆಯಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ…? ಇಮ್ಯುನಿಟಿ ಹೆಚ್ಚಿಸಿಕೊಳ್ಳುವುದಾದರೂ ಹೇಗೆ…? ಎಂಬ ಹಲವು ಪ್ರಶ್ನೆಗಳಿಗೆ ಉತ್ತರವಾಗಿ ಡಾ.ರಾಜು ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ವ್ಯಾಕ್ಸಿನ್ ಪಡೆದರೆ ಇಮ್ಯುನಿಟಿ ಜಾಸ್ತಿಯಾಗುತ್ತೆ ಎಂದು ಹೇಳಲಾಗುತ್ತಿದೆ. ಆದರೆ ಇದೊಂದು ಶುದ್ಧ ಸುಳ್ಳು ಎನ್ನುವ ಡಾ. ರಾಜು, ವ್ಯಾಕ್ಸಿನ್ ಗೂ, ಇಮ್ಯುನಿಟಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವುದೇ ಲಸಿಕೆ ಅಥವಾ ಔಷಧ ನಮ್ಮ ಇಮ್ಯುನಿಟಿಯನ್ನು ಬದಲಿಸಲ್ಲ. ನಮ್ಮ ಜೀವನ ಶೈಲಿ ಅಥವಾ ಲೈಫ್ ಸ್ಟೈಲ್, ಒಳ್ಳೆಯ ಹವ್ಯಾಸದಿಂದ ಮಾತ್ರ ನಮ್ಮ ಇಮ್ಯುನಿಟಿ ಬದಲಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Facebook ಡೇಟಾ ಸೋರಿಕೆ: ನಿಮ್ಮ ಖಾತೆ ವಿವರ ಸೋರಿಕೆಯಾಗಿದ್ರೆ ಪರಿಶೀಲಿಸುವುದು ಹೇಗೆ….? ಇಲ್ಲಿದೆ ಮಾಹಿತಿ

ಇನ್ನು ಕೊರೊನಾ ಲಸಿಕೆ ನೀಡುವುದು ಹೆಚ್ಚುತ್ತಿದ್ದಂತೆಯೇ ಕೊರೊನಾ ಪ್ರಕರಣಗಳು ದೇಶದಲ್ಲಿ, ರಾಜ್ಯದಲ್ಲಿ ಹೆಚ್ಚುತ್ತಿದೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಇದು ಸತ್ಯ. ಕೊರೊನಾ ಪ್ರಕರಣಗಳು ಇಂದು ಹೆಚ್ಚಲು ಕಾರಣ ವ್ಯಾಕ್ಸಿನೇಷನ್. ಕೊರೊನಾ ವ್ಯಾಕ್ಸಿನ್ ನಿಂದಾಗಿಯೇ ರೂಪಾಂತರ ವೈರಸ್ ಕೂಡ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ವಿಶ್ಲೇಷಣೆ ನೀಡಿರುವ ರಾಜು, ವೈರಸ್ ರೂಪಾಂತರಗೊಳ್ಳಲು ಕಾರಣ ವ್ಯಾಕ್ಸಿನ್ ಪಡೆದುಕೊಂಡಾಗ ದೇಹದಲ್ಲಿ ಪ್ರತಿರೋಧಕ ಶಕ್ತಿ ಕೆಲಸ ಮಾಡಲು ಆರಂಭವಾಗುವುದು. ಅಂದರೆ ವ್ಯಾಕ್ಸಿನ್ ಗೆ ಪ್ರತಿರೋಧವಾಗಿ ವೈರಸ್ ರೂಪಾಂತರಗೊಂಡು ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ ಎಂಬುದಾಗಿ ವಿವರಿಸಿದ್ದಾರೆ.

ಕೊರೊನಾ ಸೋಂಕಿನ ಬಗ್ಗೆ ಇರುವ ಹಲವಾರು ಪ್ರಶ್ನೆ, ಗೊಂದಲ, ಆತಂಕಗಳಿಗೆ ಉತ್ತರವಾಗಿ ಡಾ.ರಾಜು ಬಿಡುಗಡೆ ಮಾಡಿರುವ ಹೊಸ ವಿಡಿಯೋವನ್ನು ನೀವೂ ನೋಡಿ… ನಿಮ್ಮ ಅಭಿಪ್ರಾಯ ತಿಳಿಸಿ.

https://www.facebook.com/watch/?v=286991186141222

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...