ನಿಮ್ಮ ಸಿಂಗಲ್ ಫ್ರೆಂಡ್ಗೆ ಜೋಡಿ ಹುಡುಕಲು ನೀವು ಯಾವ ಮಟ್ಟಿಗೆ ಪ್ರಯತ್ನ ಮಾಡಬಹುದು..? ಲಾಸ್ ಏಂಜಲೀಸ್ನ ಯೂಟ್ಯೂಬರ್ಗಳ ತಂಡವೊಂದು ಈ ವಿಷಯದಲ್ಲಿ ಹೊಸ ಬೆಂಚ್ಮಾರ್ಕ್ ಹುಟ್ಟುಹಾಕಿದೆ. ತಮ್ಮ ತಂಡದಲ್ಲಿರುವ ಸಿಂಗಲ್ ಯುವಕನೊಬ್ಬನಿಗೆ ಸಂಭವನೀಯ ಸಂಗಾತಿ ಬೇಕೆಂದು ಲೇಟೆಸ್ಟ್ ವಿಡಿಯೋವೊಂದರ ಮೂಲಕ ’ಯಸ್ ಥಿಯರಿ’ ಎಂಬ ಚಾನೆಲ್ನಲ್ಲಿ ಸಂಗಾತಿ ಹುಡುಕಾಟದ ತಲಾಶೆಯಲ್ಲಿದ್ದಾರೆ ಈ ಮಂದಿ.
ಅಮ್ಮರ್ ಹಾಗೂ ಕ್ಯಾಮ್ ತಮ್ಮ ಸ್ನೇಹಿತ ಟಾಮಿಗೆ ಡೇಟಿಂಗ್ ಸಂಗಾತಿ ಹುಡುಕಲು ಪ್ರಯತ್ನ ಮಾಡುತ್ತಿದ್ದಾರೆ. ಏಪ್ರಿಲ್ 4, 2021ರಂದು ಶೇರ್ ಮಾಡಲಾದ 13 ನಿಮಿಷಗಳ ವಿಡಿಯೋದಲ್ಲಿ ತಮ್ಮ ವಿಡಿಯೋ ಎಡಿಟರ್ ಟಾಮಿಗೆ ಸಂಗಾತಿ ಹುಡುಕುವ ಯತ್ನ ಮಾಡಿದ್ದಾರೆ. ನಾಲ್ಕು ವರ್ಷಗಳ ರಿಲೇಷನ್ಶಿಪ್ ಒಂದು ಮುರಿದುಬಿದ್ದ ಬಳಿಕ ಬಹಳ ದಿನಗಳಿಂದ ಟಾಮಿ ಏಕಾಂತದಲ್ಲಿದ್ದಾನೆ ಎಂದು ಗೆಳೆಯರು ತಿಳಿಸಿದ್ದಾರೆ.
ಸಮುದ್ರ ದಂಡೆಯಲ್ಲಿ ಸಿಕ್ಕ ಪ್ಲಾಸ್ಟಿಕ್ ತ್ಯಾಜ್ಯಗಳಿಂದಲೇ ಬದುಕು ಕಟ್ಟಿಕೊಂಡ ಮಹಿಳೆ..!
ಟಾಮಿಯ ವ್ಯಕ್ತಿತ್ವದ ಪೂರ್ಣ ಚಿತ್ರಣ ಕೊಡುವ ಬಿಲ್ಬೋರ್ಡ್ ಒಂದನ್ನು ರಚಿಸುವುದರ ಜೊತೆಗೆ ಜಾಲತಾಣವೊಂದರಲ್ಲಿ ಆತನ ಬಗ್ಗೆ ವಿವರಿಸಿ ಹೇಳಲು ಯೂಟ್ಯೂಬರ್ ಗೆಳೆಯರು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಎಲ್ಲಾ ಪ್ರಯತ್ನಗಳ ಬಗ್ಗೆ ಟಾಮಿಗೆ ಅರಿವೇ ಇಲ್ಲದಂತೆ ಆತನನ್ನ ಪ್ರಮೋಟ್ ಮಾಡಲು ಕ್ಯಾಮ್ ಹಾಗೂ ಅಮ್ಮರ್ ಪ್ಲಾನ್ ಮಾಡಿದ್ದಾರೆ.
ಕೊನೆಗೂ ದೊಡ್ಡ ಭಿತ್ತಿಪತ್ರದಲ್ಲಿ ತನ್ನ ಮುಖವನ್ನು ಕಂಡ ಟಾಮಿ ಸಖತ್ ಚಕಿತಗೊಂಡು ಆ ಶಾಕ್ನಲ್ಲಿ ಬೆಚ್ಚಿ ಕೆಳಗೆ ಬಿದ್ದಿದ್ದಾನೆ. ಈ ವಿಡಿಯೋಗೆ ಅದಾಗಲೇ 488,626 ವೀವ್ಗಳು ಸಿಕ್ಕಿವೆ.