ದೇಹದ ತೂಕ ಇಳಿಸಬೇಕು ಅನ್ನೋ ಕನಸು ಹಲವರಲ್ಲಿದೆ. ಇಂತವರಿಗೆ ಯಾರದ್ದಾದರೂ ತೂಕ ಇಳಿಕೆಯ ಕತೆಯನ್ನ ಕೇಳಿದ್ರೆ ಸ್ಫೂರ್ತಿ ಸಿಕ್ಕಂತಾಗುತ್ತೆ. ಆದರೆ ನಾವೀಗ ಹೇಳಲು ಹೊರಟಿರುವ ಸ್ಟೋರಿಯನ್ನ ನಂಬೋದು ನಿಮಗೆ ಕೊಂಚ ಕಷ್ಟವಾಗಬಹುದು. ಆದರೆ ಫಲಿತಾಂಶವನ್ನ ನೋಡಿದ್ರೆ ನೀವು ಹುಬ್ಬೇರಿಸೋದು ಪಕ್ಕಾ..!
ಅಮೆರಿಕದ ವ್ಯಕ್ತಿಯೊಬ್ಬರು ಧಾರ್ಮಿಕ ಕಾರ್ಯಕ್ರಮವೊಂದರ ಪ್ರಯುಕ್ತ ತಮ್ಮ ಊಟವನ್ನ ತ್ಯಜಿಸಿ ಆ ಜಾಗದಲ್ಲಿ 3-5 ಪಿಂಟ್ ಬಿಯರ್ ಸೇರಿದಂತೆ ದ್ರವ ಆಹಾರ ಸೇವಿಸುವ ಮೂಲಕ ಬರೋಬ್ಬರಿ 18 ಕೆಜಿ ತೂಕ ಇಳಿಸಿದ್ದಾರೆ.
ಡ್ಯಾನ್ ಹಾಲ್ ಎಂಬಾತ ಫೆಬ್ರವರಿ ತಿಂಗಳಿನಿಂದ ಬಿಯರ್, ಚಹ, ಕಾಫಿ ಹಾಗೂ ನೀರು ಸೇರಿದಂತೆ ವಿವಿಧ ದ್ರವ ಆಹಾರಗಳನ್ನ ಮಾತ್ರ ಸೇವಿಸೋಕೆ ಆರಂಭಿಸಿದ್ರು. ಇದೊಂದು ತೂಕ ಇಳಿಕೆಯ ಸೂಕ್ತ ವಿಧಾನ ಅಲ್ಲದೇ ಇದ್ದರೂ ಸಹ ಈ ವ್ಯಕ್ತಿ ಬರೋಬ್ಬರಿ 18 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾನೆ.
ಸಾಕಷ್ಟು ಕೆಲಸಗಳ ಮೂಲಕ ಡ್ಯಾನ್ ಈ ವರ್ಷ ತಮ್ಮನ್ನ ತಾವು ಕ್ರಿಯಾಶೀಲರನ್ನಾಗಿ ಮಾಡಿಕೊಂಡಿದ್ದಾರೆ. ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಬಾರ್ & ರೆಸ್ಟಾರೆಂಟ್ ಸಿಬ್ಬಂದಿಗಾಗಿ ದೇಣಿಗೆ ಸಂಗ್ರಹಿಸಿದ್ದಾರೆ. ಈಗಾಗಲೇ 12 ಸಾವಿರ ಡಾಲರ್ ಸಂಗ್ರಹಿಸಿರುವ ಡ್ಯಾನ್ ಅದನ್ನು ಸ್ಥಳೀಯ 43 ಬಾರ್ & ರೆಸ್ಟಾರೆಂಟ್ಗಳಿಗೆ ನೀಡಿದ್ದಾರೆ.
ಬಿಯರ್ ಡಯಟ್ ಅನ್ನೋದು ಪುರಾತನ ಕ್ಯಾಥೋಲಿಕ್ ಸಂಪ್ರದಾಯವಾಗಿದೆ. ಡ್ಯಾನ್ ಕೂಡ ಒಂದೂವರೆ ತಿಂಗಳು ಈ ಡಯಟ್ನ್ನು ಮಾಡಿದ್ದು ಈ ಫಲಿತಾಂಶ ಪಡೆದಿದ್ದಾರೆ.