ಮಾತು ಮಾತಿಗೂ ಅನೇಕರು ಕೋಪ ಮಾಡಿಕೊಳ್ಳುತ್ತಾರೆ. ಕೋಪ ಮಾಡಿಕೊಂಡವರನ್ನು ನಾವು ಕೆಟ್ಟವರೆಂದು ಭಾವಿಸುತ್ತೇವೆ. ಆದ್ರೆ ಕೋಪ ಮಾಡಿಕೊಳ್ಳುವ ಜನರಿಗೊಂದು ಖುಷಿ ಸುದ್ದಿಯಿದೆ. ಕೋಪ ಮಾಡಿಕೊಳ್ಳುವುದ್ರಿಂದ ಮನಸ್ಸು ಆರೋಗ್ಯವಾಗಿರುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ನಾವು ಬೈದಿರುವುದಿಲ್ಲ. ನಮಗೆ ಗೊತ್ತಿಲ್ಲದೆ ಬೈಗುಳ ಹೊರ ಬಂದಿರುತ್ತದೆ. ಈ ಸಿಟ್ಟಿನಿಂದಲೂ ಅನೇಕ ಪ್ರಯೋಜನವಿದೆ. ಕೋಪದಿಂದ ಕೂಗಾಡಿದ್ರೆ ಒಂದು ಮಟ್ಟಿಗೆ ನೀವು ಕೋಪವನ್ನು ಕಡಿಮೆ ಮಾಡಿದಂತೆ. ಇದ್ರಿಂದ ನಿಮ್ಮ ಮನಸ್ಸು ತಾಜಾಗೊಳ್ಳುತ್ತದೆ. ಕೀನ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಕೋಪದಿಂದ ಕೂಗಾಡಿದ್ರೆ ಹೃದಯವೂ ಸಮಾಧಾನಗೊಳ್ಳುತ್ತದೆ.
ಅಧ್ಯಯನದ ಪ್ರಕಾರ, ಕೋಪ ನಮ್ಮ ಸಮಸ್ಯೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕೆಲ ವಿದ್ಯಾರ್ಥಿಗಳ ಮೇಲೆ ಇದ್ರ ಪ್ರಯೋಗ ನಡೆದಿದೆ. ಕೋಪಗೊಳ್ಳುತ್ತಿದ್ದ ವಿದ್ಯಾರ್ಥಿಗಳ ಕೈಗಳನ್ನು ತಣ್ಣನೆಯ ನೀರಿನಲ್ಲಿ ಇಡಲಾಗಿತ್ತು. ಹೆಚ್ಚು ಕೂಗಾಡುತ್ತಿದ್ದ ವಿದ್ಯಾರ್ಥಿಗಳು ತಮ್ಮ ಕೈಗಳನ್ನು ನೀರಿನಲ್ಲಿ ದೀರ್ಘಕಾಲ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ಕೂಗಾಡದ ವಿದ್ಯಾರ್ಥಿಗಳು ಬೇಗ ತಮ್ಮ ಕೈಗಳನ್ನು ತೆಗೆದುಕೊಂಡಿದ್ದರು. ಕೂಗಾಡಿದ್ರೆ ಮನಸ್ಸು ಆರೋಗ್ಯವಾಗಿರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.