ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಓರ್ವ ‘ನಾಲಾಯಕ್’ ರಾಜಕಾರಣಿ ಎಂದಿದ್ದ ಸಚಿವ ಮುರುಗೇಶ್ ನಿರಾಣಿ ಹೇಳಿಕೆಗೆ ತಿರುಗೇಟು ನೀಡಿರುವ ಯತ್ನಾಳ್ ಯಾರು ನಾಲಾಯಕ್ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಚಿವ ಮುರುಗೇಶ್ ನಿರಾಣಿ ವಿರುದ್ಧ ಕಿಡಿಕಾರಿದರು. ಜಿ.ಟಿ. ಪಾಟೀಲ್ ಸಿಡಿ ಮಾಡಿದವರು ಯಾರು? ಹೆಚ್.ವೈ.ಮೇಟಿ ಸಿಡಿ ಮಾಡಿದ್ದು ಯಾರು? ಸಪ್ಲೈ ಮಾಡಿದವರು ಯಾರು ಅವರು ನಾಲಾಯಕ್ ಎಂದು ತಿರುಗೇಟು ನೀಡಿದರು.
ಮಾಜಿ ಸಚಿವ-ಯುವತಿ ನಡುವೆ 18 ಲಕ್ಷಗಳ ವ್ಯವಹಾರ – ಸಿಡಿ ಯುವತಿ ಬಾಯ್ಬಿಟ್ಟ ಸತ್ಯ…?
ನಾನು ಮಂತ್ರಿಯಾಗಲು ಯಾರ ಕಾಲು ಹಿಡಿಯಲಿಲ್ಲ, ಪರಿಷತ್ ಸದಸ್ಯನಾಗಲೂ ಯಾರ ಕಾಲು ಹಿಡಿದಿಲ್ಲ. ಬ್ಲಾಕ್ ಮೆಲ್ ಮಾಡಿ ಮಂತ್ರಿಯಾಗಿರುವ ನಾಲಾಯಕ್ ರಿಂದ ಹೇಳಿಸಿಕೊಳ್ಳಬೇಕಿಲ್ಲ ಎಂದರು.
ಮೇಲಿನವರಿಗೆ ಏನು ಸಪ್ಲೈ ಮಾಡಿದ್ದಾರೆ ಎಂಬುದನ್ನು, ಎಲ್ಲವನ್ನು ಸಂದರ್ಭ ಬಂದಾಗ ರಾಜ್ಯದ ಜನತೆ ಮುಂದೆ ಇಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.