
ಪ್ರಿಯಕರ ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿದ ಮಹಿಳೆ ಅಸೂಯೆಯಿಂದ ಆತನ ಮರ್ಮಾಂಗ ಕತ್ತರಿಸಿದ ಘಟನೆ ತೈವಾನ್ ನಲ್ಲಿ ನಡೆದಿದೆ.
52 ವರ್ಷದ ವ್ಯಕ್ತಿ ತೈವಾನ್ನ ಚಾಂಘುವಾ ಕೌಂಟಿಯ ಕ್ಸಿಹು ಟೌನ್ಶಿಪ್ನಲ್ಲಿರುವ ತನ್ನ ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿ ಪ್ರಿಯತಮೆ 40 ವರ್ಷದ ಫುಂಗ್ ಇಂತಹ ಕೃತ್ಯವೆಸಗಿದ್ದಾಳೆ.
ಸಂತ್ರಸ್ತ ಚಿಕನ್ ನೂಡಲ್ಸ್ ವೈನ್ ಸೇವಿಸಿ ಗಾಢನಿದ್ದೆಗೆ ಜಾರಿದ್ದಾನೆ. ಈ ವೇಳೆ ಆತನ ಗೆಳತಿ ಫುಂಗ್ ಆತನ ಮರ್ಮಾಂಗದ ತುದಿ ಕತ್ತರಿಸಿ ಅದನ್ನು ಶೌಚಾಲಯದಲ್ಲಿ ಹಾಕಿ ನೀರು ಹರಿಸಿದ್ದಾಳೆ. ಅದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ತೀವ್ರ ರಕ್ತಸ್ರಾವ ಹಾಗೂ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಬಳಿಕ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಆತನಿಗೆ ಕೃತಕ ಜನನಾಂಗ ಜೋಡಿಸುವ ಕುರಿತು ವೈದ್ಯರು ಚಿಂತನೆ ನಡೆಸಿದ್ದಾರೆ. ಆತನ ವೃಷಣಗಳಿಗೆ ಯಾವುದೇ ಹಾನಿಯಾಗಿಲ್ಲ. ಮರ್ಮಾಂಗದ ತುದಿ ಕತ್ತರಿಸಲಾಗಿದೆ ಎಂದು ಹೇಳಲಾಗಿದೆ.
ಗೆಳೆಯನ ಮರ್ಮಾಂಗ ಕತ್ತರಿಸಿದ ಬಳಿಕ ಪ್ರಿಯತಮೆ ಫುಂಗ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಮರ್ಮಾಂಗದ ಭಾಗಕ್ಕಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ.