ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ತನಿಖೆ ಚುರುಕುಗೊಂಡಷ್ಟೂ ಒಂದೊಂದೇ ರಹಸ್ಯಗಳು ಬಯಲಾಗುತ್ತಿವೆ. ಸಿಡಿ ಯುವತಿ ಹಾಗೂ ಮಾಜಿ ಸಚಿವರ ನಡುವೆ 18 ಲಕ್ಷ ವ್ಯವಹಾರಗಳು ನಡೆದಿದ್ದವು ಎನ್ನಲಾಗುತ್ತಿದೆ.
ಸಿಡಿ ಯುವತಿ ಎಸ್ಐಟಿ ವಿಚಾರಣೆ ವೇಳೆ ಈ ಬಗ್ಗೆ ಬಾಯ್ಬಿಟ್ಟಿದ್ದು, ಮಾಜಿ ಸಚಿವರು ಕೊಡಿಸಿದ ಉಡುಗೊರೆಗಳ ಬಗ್ಗೆ ಮಾಹಿತಿ ನಿಡಿದ್ದಾಳೆ. ಮಾಜಿ ಸಚಿವರು 18 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್, ಬಟ್ಟೆಗಳನ್ನು ತನಗೆ ಕೊಡಿಸಿದ್ದಾಗಿ ಹೇಳಿದ್ದು, ಜುವೆಲ್ಲರಿ ಗಿಫ್ಟ್ ನ ಬಿಲ್ ಗಳನ್ನು ಯುವತಿ ಎಸ್ಐಟಿಗೆ ನೀಡಿದ್ದಾಳೆ. ಅಲ್ಲದೇ ಚಿನ್ನಾಭರಣಗಳನ್ನು ಆರ್.ಟಿ.ನಗರದ ಶಾಪ್ ನಲ್ಲಿ ಮಾಜಿ ಸಚಿವರೇ ಕೊಡಿಸಿದ್ದಾಗಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ.
ರಮೇಶ ಜಾರಕಿಹೊಳಿ ವಿರುದ್ಧ ಮತ್ತೆ ‘ಸಿಡಿ’ದ ಯುವತಿ
ಒಟ್ಟಾರೆ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎಸ್ಐಟಿ ಅಧಿಕಾರಿಗಳು ಬುಧವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವರಿಗೆ ನೋಟೀಸ್ ಜಾರಿ ಮಾಡಿದ್ದಾರೆ.