ವೈದ್ಯಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇರಾಕ್ನಲ್ಲಿ ಮೂರು ಶಿಶ್ನವುಳ್ಳ ಮಗುವೊಂದು ಜನಿಸಿದೆ. ಡುಹೋಕ್ ನಗರದ ದಂಪತಿ ತಮ್ಮ ಮೂರು ತಿಂಗಳ ಮಗುವಿನ ವೃಷಣಕೋಶ ಊದಿಕೊಂಡಿದೆ ಅಂತಾ ಮಗುವನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ವೈದ್ಯರು ಪರೀಕ್ಷೆ ನಡೆಸಿದ ವೇಳೆ ಮಗುವಿಗೆ ಎರಡು ಹೆಚ್ಚುವರಿ ಶಿಶ್ನಗಳಿವೆ ಎಂದು ತಿಳಿದು ಬಂದಿದೆ. ಒಂದು ಶಿಶ್ನದ ಸಮೀಪವೇ ಇನ್ನೊಂದು ಶಿಶ್ನ ಬೆಳೆದಿದ್ದರೆ ಮತ್ತೊಂದು ಶಿಶ್ನ ವೃಷಣಕೋಶದ ಬಳಿಯಲ್ಲಿ ಬೆಳೆದಿತ್ತು.
ಇದೊಂದು ಅತ್ಯಂತ ಅಪರೂಪದ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ. ತಾಯಿಯ ಗರ್ಭದಲ್ಲಿ ಇದ್ದ ವೇಳೆ ಮಗು ಯಾವುದೇ ಔಷಧಿಗಳ ಸಂಪರ್ಕಕ್ಕೆ ಬಂದಿಲ್ಲ. ಅಲ್ಲದೇ ಇವರ ಕುಟುಂಬದ ಆನುವಂಶಿಕ ಸಮಸ್ಯೆ ಇರೋದನ್ನೂ ವೈದ್ಯರು ಗಮನಿಸಿದ್ದಾರೆ.
ಈ ವಿಚಿತ್ರ ಮಗುವಿನ ಬಗ್ಗೆ ಸರ್ಜರಿ ಕೇಸ್ಗಳ ಅಂತಾರಾಷ್ಟ್ರೀಯ ಜರ್ನಲ್ನಲ್ಲಿ ವರದಿ ಪ್ರಕಟಿಸಲಾಗಿದೆ. ಮೂರು ಶಿಶ್ನದ ಪ್ರಕರಣ ವೈದ್ಯಕೀಯ ಇತಿಹಾಸದಲ್ಲೇ ಮೊದಲ ಪ್ರಕರಣವಾಗಿದೆ. 5 – 6 ಮಿಲಿಯನ್ ಮಕ್ಕಳಲ್ಲಿ ಒಂದು ಮಗು ಇಂತಹ ನ್ಯೂನತೆಯನ್ನ ಹೊಂದಿರುತ್ತದೆ. ನಮಗೆ ತಿಳಿದಿರುವ ಮಾಹಿತಿಯ ಪ್ರಕಾರ ಇದೇ ಮೊದಲು ಮೂರು ಶಿಶ್ನವುಳ್ಳ ಮಗುವಾಗಿದೆ ಎಂದು ವರದಿಯಲ್ಲಿ ಬರೆಯಲಾಗಿದೆ.
ಹೆಚ್ಚುವರಿ ಶಿಶ್ನಗಳಲ್ಲಿ ಮೂತ್ರನಾಳದ ವ್ಯವಸ್ಥೆ ಇಲ್ಲದ ಕಾರಣ ಅವುಗಳನ್ನ ಸರ್ಜರಿ ಮೂಲಕ ತೆಗೆದು ಹಾಕಬಹುದಾಗಿದೆ. ಡೇಲ್ ಮೇಲ್ ನೀಡಿರುವ ವರದಿಯ ಪ್ರಕಾರ 2015ರಲ್ಲಿ ಭಾರತದಲ್ಲಿ ಮೂರು ಶಿಶ್ನಗಳನ್ನ ಹೊಂದಿರುವ ಮಗುವೊಂದು ಜನಿಸಿತ್ತು. ಆದರೆ ಇದನ್ನ ವೈದ್ಯಕೀಯ ಇತಿಹಾಸದಲ್ಲಿ ಸೇರಿಸಲಾಗಿಲ್ಲ. ಇದನ್ನ ವಿಶ್ವದ ಮೊದಲ ಪ್ರಕರಣವೆಂದು ಯಾರೂ ವ್ಯಾಖ್ಯಾನಿಸಿಲ್ಲ.