ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಶಿವರಾತ್ರಿ ದಿನದಲ್ಲಿ ಬಿಡುಗಡೆಯಾದಾಗಿನಿಂದ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ‘ರಾಬರ್ಟ್’ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಮಾಡಲಾಗಿತ್ತು.
ತೆಲುಗಿನಲ್ಲಿ ಕಣ್ಣೇ ಅದಿರಿಂದಿ ಹಾಡನ್ನು ಹೇಳಿದ್ದ ಮಂಗ್ಲಿ ಸಾಕಷ್ಟು ಜನಪ್ರಿಯತೆ ಪಡೆದರು . ಹೈದರಾಬಾದ್ ನಲ್ಲಿ ನಡೆದ ‘ರಾಬರ್ಟ್’ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಮಂಗ್ಲಿ ಕಣ್ಣೇ ಅದಿರಿಂದಿ ಹಾಡನ್ನು ಹಾಡಿದ್ದರು ಈ ವಿಡಿಯೋ ಈಗಾಗಲೇ 47 ಮಿಲಿಯನ್ ವೀಕ್ಷಣೆ ಪಡೆದು ಭರ್ಜರಿಯಾಗಿ ಮುನ್ನುಗ್ಗುತ್ತಲೇ ಇದೆ.
ಇದೀಗ ಮಂಗ್ಲಿ ಕನ್ನಡದಲ್ಲಿ ಹಾಡು ಹೇಳಿದ್ದಾರೆ ‘ಕರಿಯಾ ಐ ಲವ್ ಯೂ’ ಎಂಬ ಹೊಸ ಚಿತ್ರದಲ್ಲಿ ನವೀನ್ ಸಜ್ಜು ಜೊತೆ ಮಂಗ್ಲಿ ಧ್ವನಿಗೂಡಿಸಿದ್ದಾರೆ, ಮಂಗ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಹಾಡು ಹೇಳಿದ್ದು ಗಾನಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ತಿಪ್ಪೇಶ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಮಂಜು ಬಳ್ಳಾರಿ ಹಾಗೂ ಶಕುಂತಲಾ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.