ಶಿವಮೊಗ್ಗ: ಸಿಎಂ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ, ವರಿಷ್ಠರಿಗೆ ದೂರು ವಿಚಾರವಾಗಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ನಾನು ಯಾರಿಗೂ ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ನನ್ನ ಮಾತಿಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಸಹಿ ಸಂಗ್ರಹ, ಖಾತೆ ಬದಲಾವಣೆ, ರಾಜೀನಾಮೆ ಇವೆಲ್ಲ ವಿಚಾರಗಳು ಮೊನ್ನೆ ಚರ್ಚೆಯಾದವು. ಈಗ ಅದು ಮುಗಿದ ಕಥೆ. ಯಾರು ಏನೇ ಹೇಳಿದರೂ ನನ್ನ ಪತ್ರ ನ್ಯಾಯಬದ್ಧವಾಗಿದೆ. ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸುವ ವಿಶ್ವಾಸವೂ ಇದೆ ಎಂದರು.
ಬಿಜೆಪಿಯಲ್ಲಿ ಹೊಗೆ ಶುರುವಾಗಿದೆಯಷ್ಟೇ, ಆದ್ರೆ ಕಾಂಗ್ರೆಸ್ ನಲ್ಲಿ ಬೆಂಕಿಯೇ ಬಿದ್ದಿದೆ ಎಂದು ನಕ್ಕ ರಾಜ್ಯಾಧ್ಯಕ್ಷ ನಳೀನ್ ಕಟೀಲ್
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಸಿದ್ದರಾಮಯ್ಯನವರಿಗೆ ಅರ್ಜೆಂಟಾಗಿ ಸಿಎಂ ಆಗಬೇಕಿದೆ. ಬಿಎಸ್ ವೈ ರಾಜೀನಾಮೆ ನೀಡಿದರೆ ತಾನು ಸಿಎಂ ಆಗಬಹುದು ಎಂಬ ಭ್ರಮೆಯಲ್ಲಿದ್ದಾರೆ. ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಲ್ಲ. ಹಾಗಾಗಿ ಸಿದ್ದರಾಮಯ್ಯ ಕನಸು ಕಾಣುವುದು ಬೇಡ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ಸಿದ್ದರಾಮಯ್ಯರನ್ನ ಜನ ತಿರಸ್ಕರಿಸಿದರು. ಸಿಎಂ ಸ್ಥಾನ ಕಳೆದುಕೊಂಡರು. ಈಗ ಮತ್ತೆ ತಾನು ಸಿಎಂ ಆಗಬೇಕು ಎಂದು ಆಸೆ ಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.