ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಿಬ್ಬಂದಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಸಿಬ್ಬಂದಿಗೆ ನಾಣ್ಯದ ರೂಪದಲ್ಲಿ ಸಂಬಳ ಸಿಗ್ತಿದೆ. ಬೆಸ್ಟ್ ಖಜಾನೆಯಲ್ಲಿ ಹಣವಿದೆ. ಆದ್ರೆ ಹಿಂದಿನ ವರ್ಷ ಬ್ಯಾಂಕ್ ಜೊತೆಗಿನ ಒಪ್ಪಂದ ಮುಗಿದ ಮೇಲೆ ಯಾವುದೇ ಬ್ಯಾಂಕ್, ಬೆಸ್ಟ್ ಬಳಿಯಿರುವ ನಾಣ್ಯಗಳನ್ನು ತೆಗೆದುಕೊಳ್ಳಲು ಒಪ್ಪುತ್ತಿಲ್ಲ.
ನೌಕರರ ಸಂಬಳದಲ್ಲಿ ಅರ್ಧದಷ್ಟು ಭಾಗ ನಗದು ರೂಪದಲ್ಲಿ ನೀಡಲಾಗುತ್ತದೆಯಂತೆ. ಎರಡು ರೂಪಾಯಿ, ಐದು ರೂಪಾಯಿ ನಾಣ್ಯದ ಜೊತೆಗೆ 10 ರೂಪಾಯಿ ನೋಟುಗಳನ್ನು ನೀಡಲಾಗುತ್ತದೆಯಂತೆ. ಉಳಿದ ಸಂಬಳವನ್ನು ಖಾತೆಗೆ ಜಮಾ ಮಾಡಲಾಗುತ್ತದೆಯಂತೆ. ಬೆಸ್ಟ್ ನಾಣ್ಯಗಳನ್ನು ಸಂಬಳದ ರೂಪದಲ್ಲಿ ನೀಡುವುದ್ರಿಂದ ಇಎಂಐ ಸೇರಿದಂತೆ ಅನೇಕ ಕೆಲಸಗಳಿಗೆ ಸಿಬ್ಬಂದಿ ತೊಂದರೆ ಅನುಭಿಸುತ್ತಿದ್ದಾರೆ.
ಅನೇಕ ಸಿಬ್ಬಂದಿ ದೂರದ ಪ್ರದೇಶಗಳಿಂದ ಬರುತ್ತಾರೆ. ಸ್ಥಳೀಯ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ದೊಡ್ಡ ಮೊತ್ತದಲ್ಲಿ ನಾಣ್ಯಗಳನ್ನು ಕೊಂಡೊಯ್ಯುವುದು ಅಪಾಯವೆಂದು ಅವರು ಹೇಳಿದ್ದಾರೆ. ಅನೇಕ ಬಾರಿ ಬೆಸ್ಟ್ ಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ನಾಣ್ಯಗಳ ರೂಪದಲ್ಲಿ ಸಂಬಳ ಸಿಗ್ತಿರುವುದು ಇದೇ ಮೊದಲಲ್ಲ. ಈ ಮೊದಲೂ ಅನೇಕ ಬಾರಿ ನಾಣ್ಯದ ರೂಪದಲ್ಲಿ ಸಂಬಳ ಸಿಕ್ಕಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.